ಶುಕ್ರವಾರ, ಡಿಸೆಂಬರ್ 13, 2019
26 °C
ವಿಶ್ವನಾಥ್‌ ಗೆದ್ದರೆ ಹುಣಸೂರು ಅಧೋಗತಿಗೆ; ಕಾಂಗ್ರೆಸ್ ಅಭ್ಯರ್ಥಿ ಎಚ್‌.ಪಿ.ಮಂಜುನಾಥ್ ಹೇಳಿಕೆ

‘ಅರಸುಗೆ ಸಿದ್ದರಾಮಯ್ಯ ಸಹ ಸಾಟಿಯಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ದೇವರಾಜ ಅರಸು ಅವರಿಗೆ ಸಿದ್ದರಾಮಯ್ಯ ಸಹ ಸಾಟಿಯಾಗಲ್ಲ. ಅಂಥದರಲ್ಲಿ ಮೋದಿ ಸಾಟಿಯಾಗಬಲ್ಲರೇ. ಅರಸುಗೆ ಅರಸು ಅವರೇ ಸಾಟಿ’ ಎಂದು ಹುಣಸೂರು ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಎಚ್‌.ಪಿ.ಮಂಜುನಾಥ್‌ ಶನಿವಾರ ಇಲ್ಲಿ ತಿರುಗೇಟು ನೀಡಿದರು.

ಬಿಜೆಪಿ ಅಭ್ಯರ್ಥಿ ಅಡಗೂರು ಎಚ್‌.ವಿಶ್ವನಾಥ್‌ ಕನಕ ಜಯಂತಿಯಲ್ಲಿ ಅರಸು ಜತೆ, ಮೋದಿ ಸಮೀಕರಿಸಿ ಹಾಡಿ ಹೊಗಳಿದ್ದರು.

ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನಿವಾಸದ ಬಳಿ ತಮ್ಮನ್ನು ಭೇಟಿಯಾದ ಮಾಧ್ಯಮದವರಿಗೆ ಮೇಲಿನಂತೆ ಪ್ರತಿಕ್ರಿಯಿಸಿದ ಮಂಜುನಾಥ್, ‘ಈಗಾಗಲೇ ಒಮ್ಮೆ ಶಾಸಕರಾಗಿ ಹುಣಸೂರನ್ನು ಅಧೋಗತಿಗೆ ತಳ್ಳಿದವರು. ಇದೀಗ ಮತ್ತೆ ಮಂತ್ರಿಯಾಗಿ ಇನ್ಯಾವ ಸ್ಥಿತಿಗೆ ದೂಡಲಿದ್ದಾರೆ’ ಎಂದು ವಿಶ್ವನಾಥ್ ಅವರನ್ನು ಮೂದಲಿಸಿದರು.

‘ವಿಶ್ವನಾಥ್ ಬೆಣ್ಣೆಯಂತೆ ಮಾತನಾಡುತ್ತಾರೆ. ದೇವರಾಜ ಅರಸು ಹೆಸರಿಗೆ ಮಸಿ ಬಳಿಯುವ ಯತ್ನ ಮಾಡುತ್ತಿದ್ದಾರೆ. ಹುಣಸೂರು ಕ್ಷೇತ್ರದ ಜನರಿಗೆ ಮೋಸ ಮಾಡಿದ್ದಾರೆ’ ಎಂದು ಮಂಜುನಾಥ್ ಹರಿಹಾಯ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು