ಆಷಾಢ ಶುಕ್ರವಾರ; ಸಂಚಾರ ಮಾರ್ಗ ಬದಲಾವಣೆ

7

ಆಷಾಢ ಶುಕ್ರವಾರ; ಸಂಚಾರ ಮಾರ್ಗ ಬದಲಾವಣೆ

Published:
Updated:

ಮೈಸೂರು: ಕೊನೆಯ ಆಷಾಢ ಶುಕ್ರವಾರದಲ್ಲಿ ಚಾಮುಂಡಿಬೆಟ್ಟದಲ್ಲಿ ವಾಹನ ದಟ್ಟಣೆ ತಪ್ಪಿಸಲು ಸಂಚಾರ ಮಾರ್ಗದಲ್ಲಿ ಮಾರ್ಪಾಡು ಮಾಡಲಾಗಿದೆ.

ಆಗಸ್ಟ್ 9ರಂದು ರಾತ್ರಿ 11 ಗಂಟೆಯಿಂದ 10ರಂದು ರಾತ್ರಿ 12 ಗಂಟೆವರೆಗೆ ನಗರ ಬಸ್ ನಿಲ್ದಾಣದಿಂದ ಚಾಮುಂಡಿಬೆಟ್ಟಕ್ಕೆ ತೆರಳುವ ಎಲ್ಲಾ ನಗರ ಸಾರಿಗೆ ಬಸ್‍ಗಳು ಕುರುಬಾರಹಳ್ಳಿ ಸರ್ಕಲ್ ಬಳಿ ಬಲ ತಿರುವು ಪಡೆದು, ಕೆ.ಸಿ.ಲೇಔಟ್ ಜಂಕ್ಷನ್ ಬಳಿ ಎಡ ತಿರುವು ಪಡೆದು, ಕೆ.ಸಿ.ರಸ್ತೆ ಮೂಲಕ ಹೆಲಿಪ್ಯಾಡ್ ರಸ್ತೆ ಜಂಕ್ಷನ್ ತಲುಪಿ ಬಲ ತಿರುವು ಪಡೆದು, ಹೆಲಿಪ್ಯಾಡ್ ರಸ್ತೆ ಮೂಲಕ ಲಲಿತಮಹಲ್ ಹೈವಾಕ್ ಜಂಕ್ಷನ್ ಬಳಿ ಬಲ ತಿರುವು ಪಡೆದು, ಹೈವಾಕ್ ರಸ್ತೆ ಮುಖಾಂತರ ಚಾಮುಂಡಿ ಬೆಟ್ಟಕ್ಕೆ ತೆರಳಬೇಕು.

ಬೆಟ್ಟದಿಂದ ವಾಪಸ್ ನಗರ ಬಸ್‍ನಿಲ್ದಾಣಕ್ಕೆ ತೆರಳುವ ನಗರ ಸಾರಿಗೆ ಬಸ್‍ಗಳು, (ಹೆಲಿಪ್ಯಾಡ್ ಬಳಿ ವ್ಯವಸ್ಥೆ ಮಾಡಿರುವ ಉಚಿತ ಸಾರಿಗೆ ಬಸ್‍ಗಳನ್ನು ಹೊರತುಪಡಿಸಿ) ಪಾಸ್ ಹೊಂದಿರುವ ವಾಹನಗಳು ಇನ್ನುಳಿದ ಇತರ ಎಲ್ಲಾ ವಾಹನಗಳು ತಾವರೆಕಟ್ಟೆ ಬಳಿ ಎಡತಿರುವು ಪಡೆದು ಸಿ.ಎ.ಆರ್ ಮುಂಭಾಗದ ರಸ್ತೆ ಮುಖಾಂತರ ಬುಲೇವಾರ್ಡ್ ವೃತ್ತ ತಲುಪಿ ಮುಂದೆ ಸಾಗಬೇಕು.

ಚಾಮುಂಡಿ ಬೆಟ್ಟದಿಂದ ನಗರದ ಕಡೆಗೆ ಬರುವ ರಸ್ತೆಯಲ್ಲಿ ತಾವರೆಕಟ್ಟೆಯಿಂದ ಕುರುಬಾರಹಳ್ಳಿ ಸರ್ಕಲ್‍ವರೆಗೆ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿರುತ್ತದೆ. ಇಲ್ಲಿ ಕೇವಲ ಹೆಲಿಪ್ಯಾಡ್‌ ಬಳಿ ವ್ಯವಸ್ಥೆ ಮಾಡಿರುವ ಉಚಿತ ಸಾರಿಗೆ ಬಸ್‌ಗಳು ಮಾತ್ರ ಸಂಚರಿಸುತ್ತವೆ.

ಚಾಮುಂಡಿ ಬೆಟ್ಟದಿಂದ ವಾಪಸ್ ಹೆಲಿಪ್ಯಾಡ್‍ಗೆ ಬರುವ ಉಚಿತ ಸಾರಿಗೆ ಬಸ್‍ಗಳು ಎಂದಿನಂತೆ ತಾವರೆಕಟ್ಟೆಯಿಂದ ಕುರುಬಾರಹಳ್ಳಿ ವೃತ್ತದ ಕಡೆಗೆ ಬರುವ ರಸ್ತೆಯಲ್ಲಿ ಮುಂದೆ ಸಾಗಿ ಜೆ.ಸಿ.ರಸ್ತೆ ಜಂಕ್ಷನ್‍ನಲ್ಲಿ ಬಲತಿರುವು ಪಡೆದು ಜೆ.ಸಿ.ರಸ್ತೆಯ ಮೂಲಕ ಹೆಲಿಪ್ಯಾಡ್ ತಲುಪಬೇಕು ಎಂದು ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !