ನನ್ನ ಮಕ್ಕಳಿಗೆ ಸುಂದರಿಯರನ್ನು ಹುಡುಕಿ: ಖೇಣಿ

7
₹ 200 ಕೊಟ್ಟವನು ₹ 200 ಕೋಟಿ ಮಾಡಿಕೊಳ್ಳುತ್ತಾನೆ: ಅಶೋಕ್‌ ಖೇಣಿ

ನನ್ನ ಮಕ್ಕಳಿಗೆ ಸುಂದರಿಯರನ್ನು ಹುಡುಕಿ: ಖೇಣಿ

Published:
Updated:

ಮೈಸೂರು: ‘ನನ್ನ ಇಬ್ಬರು ಮಕ್ಕಳನ್ನು ಸುತ್ತೂರು ಮಠದಲ್ಲೇ ಮದುವೆ ಮಾಡಿಕೊಡಬೇಕೆಂದಿದ್ದೇನೆ. ಅವರಿಗೆ ಸುಂದರಿಯರನ್ನು ಹುಡುಕಿಕೊಡುವುದು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಜವಾಬ್ದಾರಿ. ಹೆಣ್ಣುಮಕ್ಕಳು ಲಿಂಗಾಯತರಾಗಿರಬೇಕು’ ಎಂದು ಕಾಂಗ್ರೆಸ್‌ ಮುಖಂಡ ಅಶೋಕ್‌ ಖೇಣಿ ತಿಳಿಸಿದರು.

ಸುತ್ತೂರು ಮಠದಲ್ಲಿ ಭಾನುವಾರ ಆಯೋಜಿಸಿದ್ದ ಬಸವ ಜಯಂತ್ಯುತ್ಸವದಲ್ಲಿ ಮಾತನಾಡಿ, ‘ಸ್ವಾಮೀಜಿ ಕಣ್ಣುಗಳು ಸುಂದರವಾಗಿವೆ. ಪತ್ನಿಯೂ ಹೊಗಳುತ್ತಿರುತ್ತಾಳೆ. ನಾನು ರಾಜಕೀಯ, ಉದ್ಯಮ ಕ್ಷೇತ್ರ ನೋಡಿದ್ದೇನೆ. ಈಗ ಮಠ ಕಟ್ಟಿ ಸ್ವಾಮೀಜಿ ಆಗಬೇಕೆಂದಿದ್ದೇನೆ. ಈ ವಿಚಾರವನ್ನು ಸ್ವಾಮೀಜಿ ಬಳಿ ಹೇಳಿದೆ. ಅದಕ್ಕೆ ಅವರು ಪತ್ನಿ ಒಪ್ಪಿಗೆಯ ಲಿಖಿತ ಪತ್ರ ತರಲು ಹೇಳಿದರು’ ಎಂದು ಹೇಳಿದಾಗ ಸಭಾಂಗಣದಲ್ಲಿ ನಗುವಿನ ಅಲೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !