ನಾಲೆಗೆ ಉರುಳಿದ ಆಟೊ; ವದಂತಿ

7

ನಾಲೆಗೆ ಉರುಳಿದ ಆಟೊ; ವದಂತಿ

Published:
Updated:
Deccan Herald

ಮೈಸೂರು: ಸರಗೂರು ತಾಲ್ಲೂಕಿನ ಶಾಂತಿಪುರ ಗ್ರಾಮದ ಬಳಿ ಕಬಿನಿ ನಾಲೆಗೆ ಆಟೊವೊಂದು ಉರುಳಿದೆ ಎಂಬ ವದಂತಿ ಬುಧವಾರ ಬೆಳಿಗ್ಗೆ ಹರಡಿದ್ದು, ಪೊಲೀಸರು ಹಾಗೂ ಅಗ್ನಿಶಾಮಕ ಪಡೆ ಹುಡುಕಾಟ ಆರಂಭಿಸಿದ್ದಾರೆ. ಆದರೆ, ಆಟೊ ಉರುಳಿರುವ ಕುರಿತು ಯಾವುದೇ ಕುರುಹು ಪತ್ತೆಯಾಗಿಲ್ಲ.‌

ನಾಲೆಯಲ್ಲಿ ನೀರು ರಭಸವಾಗಿ ಹರಿಯುತ್ತಿರುವುದು ಹುಡುಕಾಟಕ್ಕೆ ತೊಂದರೆಯಾಗಿದೆ. ಕಬಿನಿ ಜಲಾಶಯದಿಂದ ನೀರು ನಿಲ್ಲಿಸಿದ ಬಳಿಕವಷ್ಟೇ ನೀರಿಗಿಳಿಯಲು ಸಾಧ್ಯ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ, ಪಾತಳ ಗರುಡ (ಗ್ರಾಪ್ನಲ್) ಸಾಧನದಿಂದಷ್ಟೇ ರಕ್ಷಣಾ ತಂಡ ಪರಿಶೀಲನಾ ಕಾರ್ಯ ಕೈಗೊಂಡಿದೆ.

ಆಟೊದಲ್ಲಿ ಸುಮಾರು 15ರಿಂದ 20 ಜನರು ಇದ್ದರು ಎಂಬ ವದಂತಿ ಇದೆ. ಆದರೆ, ಯಾರೊಬ್ಬರೂ ಆಟೊ ಉರುಳುತ್ತಿರುವುದನ್ನು ನೋಡಿಲ್ಲ. ನಾಲೆಯ ಒಂದು ಬದಿಯ ತಡೆಗೋಡೆ ಮುರಿದು ನೀರಿನಲ್ಲಿ ಬಿದ್ದಿದೆ. ರಸ್ತೆ ಬದಿ ಆಟೊ ಗಾಜಿನ ಪುಡಿ, ಕನ್ನಡಿಯ ಚೂರುಗಳು ದೊರೆತಿದೆ. ಇದರ ಆಧಾರದ ಮೇಲೆ ನಾಲೆಗೆ ಉರುಳಿರಬಹುದು ಎಂದು ಶಂಕಿಸಲಾಗಿದೆ. ಸ್ಥಳದಲ್ಲಿ ನೂರಕ್ಕೂ ಅಧಿಕ ಮಂದಿ ಸೇರಿದ್ದಾರೆ. ಒಂದು ವಿಧದ ಪ್ಯಾನಿಕ್ ಸೃಷ್ಟಿಯಾಗಿದೆ.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !