ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಡಿ.10 ರಿಂದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ

Last Updated 17 ನವೆಂಬರ್ 2021, 12:05 IST
ಅಕ್ಷರ ಗಾತ್ರ

ಮೈಸೂರು: ಮೈಸೂರು ರಂಗಾಯಣದಿಂದ ಡಿ.10 ರಿಂದ 19ರ ವರೆಗೆ ‘ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ’ ಆಯೋಜಿಸಲಾಗಿದ್ದು, ವಿವಿಧ ಭಾಷೆಗಳ ನಾಟಕ ಪ್ರದರ್ಶನ ನಡೆಯಲಿದೆ.

‘ಕೋವಿಡ್‌ ಕಾರಣ ಕಳೆದ ವರ್ಷ ಬಹುರೂಪಿ ನಾಟಕೋತ್ಸವ ಆಯೋಜನೆಯಾಗಿರಲಿಲ್ಲ. ಕೊರೊನಾ ಆತಂಕ ದೂರವಾಗಿದ್ದು, ರಂಗಾಯಣದ ಅವರಣದಲ್ಲಿ ನಾಟಕೋತ್ಸವವನ್ನು ವೈಭವದಿಂದ ನಡೆಸಲು ನಿರ್ಧರಿಸಲಾಗಿದೆ. ಹೊರ ರಾಜ್ಯಗಳ 10 ನಾಟಕಗಳು ಸೇರಿದಂತೆ ಒಟ್ಟು 36 ನಾಟಕಗಳು ಪ್ರದರ್ಶನಗೊಳ್ಳಲಿವೆ’ ಎಂದು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಈ ಬಾರಿ ‘ತಾಯಿ’ ಎಂಬ ವಿಷಯ ಇಟ್ಟುಕೊಂಡು ನಾಟಕೋತ್ಸವ ನಡೆಯಲಿದೆ. ಇದೇ ವೇಳೆ ರಾಷ್ಟ್ರಮಟ್ಟದ ವಿಚಾರ ಸಂಕಿರಣ, ಅಂತರರಾಷ್ಟ್ರೀಯ ಚಲನಚಿತ್ರೋತ್ಸವ, ಜಾನಪದ ಕಲಾ ಪ್ರದರ್ಶನ, ಕರಕುಶಲ ವಸ್ತುಪ್ರದರ್ಶನವೂ ಇರಲಿದೆ’ ಎಂದು ಮಾಹಿತಿ ನೀಡಿದರು.

₹ 75 ಲಕ್ಷ ವೆಚ್ಚ: ‘10 ದಿನಗಳ ನಾಟಕೋತ್ಸವಕ್ಕೆ ಅಂದಾಜು ₹ 75 ಲಕ್ಷ ವೆಚ್ಚವಾಗಲಿದೆ. ಬಹುರೂಪಿಯನ್ನು ಕಳೆದ ವರ್ಷವೇ ‘ಉತ್ಸವ’ಗಳ ಪಟ್ಟಿಗೆ ಸೇರಿಸಿರುವ ಸರ್ಕಾರ, ₹ 50 ಲಕ್ಷ ಅನುದಾನ ಬಿಡುಗಡೆ ಮಾಡಿದೆ. ಇನ್ನುಳಿದ ಮೊತ್ತವನ್ನು ಇತರ ಮೂಲಗಳಿಂದ ಸಂಗ್ರಹಿಸಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT