ಶುಕ್ರವಾರ, ಜನವರಿ 22, 2021
19 °C
ಕೋವಿಡ್ ಆತಂಕದಲ್ಲೂ ತಂಬಾಕು ಬೆಳೆದ ರೈತರು: ಚಿಲ್ಕುಂದ ಹರಾಜು ಮಾರುಕಟ್ಟೆ ಆರಂಭ

ತಂಬಾಕು ಬೆಳೆಗೆ ಸರಾಸರಿ ಉತ್ತಮ ದರ: ಸಂಸದ ಪ್ರತಾಪಸಿಂಹ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಣಸೂರು: ‘ಹಲವು ಜನಪ್ರತಿನಿಧಿಗಳು ಕೋವಿಡ್ ನೆಪವೊಡ್ಡಿ ‘ಬೆಳೆ ರಜೆ’ ಘೋಷಣೆಗೆ ಒತ್ತು ನೀಡಿದ್ದರೂ ಈ ಹಂತದಲ್ಲಿ ರೈತನಿಗೆ ವಿಶ್ವಾಸ ತುಂಬಿದ್ದರಿಂದ ರಾಜ್ಯದ ಪ್ರಮುಖ ವಾಣಿಜ್ಯ ಬೆಳೆ ತಂಬಾಕು ಬೆಳೆದಿದ್ದು, ಮಾರುಕಟ್ಟೆ ಆರಂಭವಾಗಿದೆ’ ಎಂದು ಸಂಸದ ಪ್ರತಾಪಸಿಂಹ ಹೇಳಿದರು.

ತಾಲ್ಲೂಕಿನ ಚಿಲ್ಕುಂದ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಬುಧವಾರ ಪ್ರಸಕ್ತ ಸಾಲಿನ ಹರಾಜು ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿದ  ಅವರು, ‘ಏಪ್ರಿಲ್ ತಿಂಗಳಲ್ಲಿ ಎದುರಾದ ಕೋವಿಡ್ ಆತಂಕ ಕೃಷಿ ಮೇಲೂ ಆವರಿಸಿತ್ತು. ಆ ಹಂತದಲ್ಲಿ ರೈತರಿಗೆ ಧೈರ್ಯ ಮತ್ತು ವಿಶ್ವಾಸ ತುಂಬಿ ತಂಬಾಕು ಬೆಳೆಯಲು ಹೇಳಲಾಗಿತ್ತು ಅದು ಫಲ ನೀಡಿದೆ’ ಎಂದರು.

‘ಮಾರುಕಟ್ಟೆ ಆರಂಭದಲ್ಲಿ ಸಿಗುವ ದರ ನಂತರದಲ್ಲಿ ಸಿಗುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದ್ದು, ಇದಕ್ಕೆ ಈ ಸಾಲಿನಲ್ಲಿ ಕಡಿವಾಣ ಹಾಕಲಾಗಿದೆ. ಕಂಪನಿಯೊಂದಿಗೆ ಮಾತನಾಡಿದ್ದು ಆರಂಭದಲ್ಲಿ ನೀಡುವ ಸರಾಸರಿ ದರ ಅಂತ್ಯದವರೆಗೂ ಕಾದುಕೊಳ್ಳುವಂತೆ ಸೂಚಿಸಲಾಗಿದೆ’ ಎಂದರು.

‘ತಂಬಾಕು ಮಂಡಳಿ ಅಧ್ಯಕ್ಷರ ಸೂಚನೆ ಮೇಲೆ ಕಗ್ಗುಂಡಿ ಮತ್ತು ಚಿಲ್ಕುಂದ ಹರಾಜು ಮಾರುಕಟ್ಟೆ ಸೆ 30ಕ್ಕೆ ಆರಂಭಿಸಿದ್ದು, ಉಳಿದ ಹರಾಜು ಮಾರುಕಟ್ಟೆ ಅ. 7ರಂದು ಆರಂಭವಾಗಲಿದೆ. ಇಂದಿನ ಮಾರುಕಟ್ಟೆಗೆ 5 ಕಂಪನಿಗಳು ಭಾಗವಹಿಸಿದ್ದು, ಆಂಧ್ರಪ್ರದೇಶ ಮಾರುಕಟ್ಟೆ ಮುಕ್ತಾಯವಾದ ಬಳಿಕ ರಾಜ್ಯಕ್ಕೆ 21 ಕಂಪನಿಗಳು ಭಾಗವಹಿಸಲಿದೆ’ ಎಂದರು.

ಕಾರ್ಯಕ್ರಮದಲ್ಲಿ ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ನಾಗಣ್ಣ, ರಾಜ್ಯ ಕೊಳಚೆ ನಿರ್ಮೂಲನೆ ಮಂಡಳಿ ಸದಸ್ಯ ಆರ್.ಟಿ.ಸತೀಶ್, ಡಾ.ಪ್ರಕಾಶ್ ಬಾಬು, ಜಿಲ್ಲಾ ಘಟಕದ ಉಪಾಧ್ಯಕ್ಷ ರಾಜೇಗೌಡ, ತಂಬಾಕು ಮಂಡಳಿ ಅಧಿಕಾರಿ ಮಂಜುನಾಥ್‌, ಸಿದ್ದರಾಜು ಹಬ್ಬನಕುಪ್ಪೆ ದಿನೇಶ್ ಸೇರಿದಂತೆ ಇತರರು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು