ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ಪಾಲಿಕೆ ಮೇಯರ್‌ ಚುನಾವಣೆ| ಜೆಡಿಎಸ್‌ಗೆ ಮುಖಭಂಗ, ಬಿಜೆಪಿಗೆ ಧಮಾಕಾ!

ಮೈಸೂರು ಮಹಾನಗರಪಾಲಿಕೆ: ಶಿವಕುಮಾರ್‌ ಮೇಯರ್‌, ಜಿ.ರೂಪಾ ಉಪ ಮೇಯರ್‌
Last Updated 6 ಸೆಪ್ಟೆಂಬರ್ 2022, 21:46 IST
ಅಕ್ಷರ ಗಾತ್ರ

ಮೈಸೂರು: ರೋಚಕ ತಿರುವು ಪಡೆದುಕೊಂಡ ಮೈಸೂರು ಮಹಾನಗರಪಾಲಿಕೆ ಮೇಯರ್ ಮತ್ತು ಉಪ ಮೇಯರ್‌ ಚುನಾವಣೆಯಲ್ಲಿ ಬಿಜೆಪಿಗೆ ಡಬಲ್ ಧಮಾಕಾ ದೊರೆತರೆ, ಜೆಡಿಎಸ್‌ ಮುಖಭಂಗ ಅನುಭವಿಸಿತು.

‘ಮೈತ್ರಿ’ ಮಾಡಿಕೊಂಡರೂ, ಕೊನೆ ಕ್ಷಣದ ಎಡವಟ್ಟಿನಿಂದ ಜೆಡಿಎಸ್‌ಗೆ ಒಂದು ಸ್ಥಾನವೂ ದಕ್ಕಲಿಲ್ಲ. ಎರಡು ಸ್ಥಾನಗಳು ಬಿಜೆಪಿಗೆ ಒಲಿದವು. ಮೇಯರ್‌ ಆಗಿ ಶಿವಕುಮಾರ್‌, ಉಪ ಮೇಯರ್‌ ಆಗಿ ಜಿ.ರೂಪಾ ಅವರು ಸೋಮವಾರ ಆಯ್ಕೆಯಾದರು.

ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಜೆಡಿಎಸ್ ಅಭ್ಯರ್ಥಿ ಕೆ.ವಿ.ಶ್ರೀಧರ್ ಅವರು ನಾಮಪತ್ರ ವಾಪಸ್ ಪಡೆದಿದ್ದರಿಂದ ಬಿಜೆಪಿ-ಕಾಂಗ್ರೆಸ್ನಡುವೆ ಸ್ಪರ್ಧೆ ನಡೆಯಿತು. ಕಾಂಗ್ರೆಸ್‌ನ ಸೈಯದ್ ಹಸರತ್‌
ಉಲ್ಲಾ 28, ಬಿಜೆಪಿಯ ಶಿವಕುಮಾರ್ 47 ಮತ ಗಳಿಸಿ ಗೆದ್ದರು. ಜೆಡಿಎಸ್‌ನ ರೇಷ್ಮಾ ಬಾನು ಸಲ್ಲಿಸಿದ್ದ ನಾಮಪತ್ರ ತಿರಸ್ಕೃತವಾದ್ದರಿಂದ ಉಪಮೇಯರ್‌ ಸ್ಥಾನವೂ ಬಿಜೆಪಿ ಪಾಲಾಯಿತು. ಬಿಜೆಪಿಯ ಜಿ.ರೂಪಾ 45 ಮತ ಗಳಿಸಿ ಗೆದ್ದರು.‌

‘ರೇಷ್ಮಾ ಸಾಮಾನ್ಯ ಕ್ಷೇತ್ರದಿಂದ ಗೆದ್ದಿದ್ದಾರೆ. ಉಪ ಮೇಯರ್ ಸ್ಥಾನ ಹಿಂದುಳಿದ ವರ್ಗ ‘ಎ’ ಮಹಿಳೆಗೆ ಮೀಸಲಾಗಿದೆ. ಆ ಜಾತಿ ಪ್ರಮಾಣಪತ್ರ ನೀಡದಿದ್ದರಿಂದ ನಾಮಪತ್ರ ತಿರಸ್ಕರಿಸಲಾಗಿದೆ’ ಎಂದು ಚುನಾವಣಾಧಿಕಾರಿ, ಪ್ರಾದೇಶಿಕ ಆಯುಕ್ತ ಡಾ.ಜಿ.ಸಿ.ಪ್ರಕಾಶ್‌ ಹೇಳಿದರು.

ಮೇಯರ್‌ ಚುನಾವಣೆಯಲ್ಲಿ ಜೆಡಿಎಸ್ ಬಂಡಾಯ ಅಭ್ಯರ್ಥಿ ನಿರ್ಮಲಾ ಅವರಿಗೆ ಕಾಂಗ್ರೆಸ್ ಬೆಂಬಲ ನೀಡಿತು. ಅವರು, 27 ಮತ ಪಡೆದರು. ಅಭ್ಯರ್ಥಿ, ಜೆಡಿಎಸ್ ಶಾಸಕರಾದ ಜಿ.ಟಿ.ದೇವೇಗೌಡ, ಸಿ.ಎನ್.ಮಂಜೇಗೌಡರ ಆಕ್ಷೇಪಕ್ಕೆ ಚುನಾವಣಾಧಿಕಾರಿ ಮನ್ನಣೆ ನೀಡಲಿಲ್ಲ. ‘ಸಮಯ ಮುಗಿದಿದೆ. ಈಗ ಜಾತಿ ಪ್ರಮಾಣಪತ್ರ ಪರಿಗಣಿಸಲಾಗದು’ ಎಂದರು. ನಂತರ ಚುನಾವಣೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT