ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಕ್ತ ದಾನ ಮಾಡಿ ಜೀವ ಉಳಿಸಿ’

Last Updated 17 ಸೆಪ್ಟೆಂಬರ್ 2022, 16:50 IST
ಅಕ್ಷರ ಗಾತ್ರ

ಮೈಸೂರು: ‘ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಆತ್ಯಾಧುನಿಕ ಬ್ಲಡ್‌ ಬ್ಯಾಂಕ್ ಇದ್ದು, ಯಾವುದೇ ಕಾಯಿಲೆ ಇರದ ಆರೋಗ್ಯವಂತ 18ರಿಂದ 60 ವರ್ಷ ವಯಸ್ಸಿನವರು ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತ ದಾನ ಮಾಡಿ ಅಮೂಲ್ಯ ಜೀವಗಳನ್ನು ಉಳಿಸಲು ಸಹಕರಿಸಬೇಕು’ ಎಂದು ನಗರದ ಜಯದೇವ ಹೃದ್ರೋಗ ಆಸ್ಪತ್ರೆಯ ಮೆಡಿಕಲ್‌ ಸೂಪರಿಂಟೆಂಡೆಂಟ್ ಡಾ.ಕೆ.ಎಸ್.ಸದಾನಂದ ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ 72ನೇ ಹುಟ್ಟುಹಬ್ಬದ ಅಂಗವಾಗಿ ಶನಿವಾರ ಆಯೋಜಿಸಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರತಿ ಶಸ್ತ್ರಚಿಕಿತ್ಸೆಗೆ 5 ಬಾಟಲಿ ರಕ್ತ ಬೇಕಾಗುತ್ತದೆ. ನಮ್ಮಲ್ಲಿ ಪ್ರತಿನಿತ್ಯ ಸರ್ಜರಿ ಕೇಸ್ ಮಾಡುವುದರಿಂದ ಪ್ರತಿದಿನ 15 ಯೂನಿಟ್‌ ರಕ್ತ ಬೇಕಾಗುತ್ತದೆ. ಎಚ್.ಬಿ. 12.5ಕ್ಕಿಂತ ಹೆಚ್ಚು ರಕ್ತ ಇದ್ದರೆ ಮಾತ್ರ ದಾನ ಮಾಡಬಹುದು. ಇಂತಹ ಶಿಬಿರಗಳು ತುಂಬಾ ಸಹಕಾರಿಯಾಗುತ್ತವೆ’ ಎಂದರು.

25 ಮಂದಿ ರಕ್ತ ದಾನ ಮಾಡಿದರು.

ಬ್ಲಡ್‌ ಬ್ಯಾಂಕ್ ಮುಖ್ಯಸ್ಥೆ ಡಾ.ರಶ್ಮಿ, ಆರ್.ಎಂ.ಒ. ಡಾ.ಪಶುಪತಿ, ಡಾ.ದೇವರಾಜ್, ಡಾ.ಅಶ್ವಿನಿ, ನರ್ಸಿಂಗ್ ಸೂಪರಿಂಟೆಂಡೆಂಟ್ ಹರೀಶ್‌ಕುಮಾರ್, ಪಿ.ಆರ್.ಒ. ಚಂಪಕಮಾಲಾ, ಕಾವೇರಿ ಹರೀಶ್, ರೇಖಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT