ಸೋಮವಾರ, ಸೆಪ್ಟೆಂಬರ್ 27, 2021
22 °C

ಭಾವನ ಕೊಲೆ ಮಾಡಿ ಪೊಲೀಸರಿಗೆ ಶರಣಾದ ಭಾಮೈದುನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಇಲ್ಲಿನ ಗೌಸಿಯಾನಗರದಲ್ಲಿ ಕದೀರ್ ಎಂಬುವರು ತಮ್ಮ ಭಾವನನ್ನೇ ಕೊಲೆ ಮಾಡಿ, ಕೈಗಳನ್ನು ಕತ್ತರಿಸಿ ಉದಯಗಿರಿ ಪೊಲೀಸ್‌ ಠಾಣೆಗೆ ತಂದು ಶರಣಾಗಿದ್ದಾರೆ.

ಮಹಮದ್ ಸರಾನ್ (27) ಕೊಲೆಯಾದವರು.

ಕಳೆದ ಐದು ತಿಂಗಳ ಹಿಂದಷ್ಟೇ ಮಹಮ್ಮದ್ ಸರಾನ್ ಮತ್ತು ರೂಬೀನಾ ಅವರ ಮದುವೆಯಾಗಿತ್ತು. ಇಬ್ಬರ ನಡುವೆ ಕೌಟುಂಬಿಕ ಕಲಹ, ಜಗಳ ಉಂಟಾಗಿತ್ತು. ಹೀಗಾಗಿ, ಪೋಷಕರು ಬುದ್ಧಿವಾದ ಹೇಳಿದ್ದರು. ಆದರೂ ಇಬ್ಬರ ನಡುವೆ ಕಲಹ ನಿಂತಿರಲಿಲ್ಲ. ಹೀಗಾಗಿ, ಕದೀರ್‌ ಭಾವನನ್ನು ಕೊಲೆ ಮಾಡಿದ್ದಾರೆ.

ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.