ಬುಧವಾರ, ನವೆಂಬರ್ 13, 2019
28 °C

ಬಿ.ಎಸ್.ಯಡಿಯೂರಪ್ಪ ನಮ್ಮ ಪ್ರಶ್ನಾತೀತ ನಾಯಕ: ಸಚಿವ ಸೋಮಣ್ಣ

Published:
Updated:

ಮೈಸೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಮ್ಮ ಪ್ರಶ್ನಾತೀತ ನಾಯಕ ಎಂದು ಸಚಿವ ಸೋಮಣ್ಣ ತಿಳಿಸಿದರು.

ಆಂತರಿಕ ಸಭೆಯಲ್ಲಿ ಮಾತನಾಡಿದ ಆಡಿಯೊ ವೈರಲ್ ಆಗಿದ್ದು ಶಿಸ್ತಿನ ಪಕ್ಷಕ್ಕೆ ಶೋಭೆ ತರುವುದಿಲ್ಲ. ವರಿಷ್ಠರು ಈ ಬಗ್ಗೆ ಕ್ರಮ ಜರುಗಿಸಲಿದ್ದಾರೆ.

ಅನರ್ಹ ಶಾಸಕರ ರಾಜೀನಾಮೆಯಿಂದಲೇ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿರೋದು. ಕತ್ತಿ, ಸವದಿ ಹೇಳಿಕೆಗಳು ಇಲ್ಲಿ ಗೌಣ.

ಸಿದ್ದರಾಮಯ್ಯ ಹಳೆ ಸಿದ್ದರಾಮಯ್ಯ ಆಗಿರಲಿ. ಕಾಂಗ್ರೆಸ್ ನವರನ್ನು ಮೆಚ್ಚಿಸಲು ಮಾತನಾಡೋದನ್ನು ಬಿಡಲಿ ಎಂದು ಸೋಮಣ್ಣ ಸರ್ಕಾರದ ಬಗೆಗಿನ ಟೀಕೆಗೆ ಪ್ರತಿಕ್ರಿಯಿಸಿದರು.

ಪ್ರತಿಕ್ರಿಯಿಸಿ (+)