ಶುಕ್ರವಾರ, ಫೆಬ್ರವರಿ 28, 2020
19 °C
ನಂದಿನಿ ಮಿಲ್ಕ್ ಗ್ಯಾಲಕ್ಸಿಗೆ ಚಾಲನೆ

ಬಕೆಟ್‌ ಮೊಸರಿನಿಂದ ಪ್ಲಾಸ್ಟಿಕ್‌ಗೆ ಕಡಿವಾಣ: ಸಿದ್ದೇಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಮೈಸೂರು ಜಿಲ್ಲಾ ಸಹಕಾರಿ ಹಾಲು ಒಕ್ಕೂಟ ನಿಯಮಿತದ ವತಿಯಿಂದ ನಗರದಲ್ಲಿ ನಂದಿನಿ ಮಿಲ್ಕ್ ಗ್ಯಾಲಕ್ಸಿ ಕಟ್ಟಡವನ್ನು ಬುಧವಾರ ಉದ್ಘಾಟಿಸಲಾಯಿತು.

ಸಿದ್ಧಾರ್ಥ ನಗರದಲ್ಲಿನ ಪ್ರದಾನ ಡೇರಿ ಮುಂಭಾಗದಲ್ಲಿ ನಂದಿನಿ ಮಿಲ್ಕ್ ಗ್ಯಾಲಕ್ಸಿ ಕಟ್ಟಡವನ್ನು ಒಕ್ಕೂಟದ ಅಧ್ಯಕ್ಷ ಎಸ್.ಸಿದ್ದೇಗೌಡ ಉದ್ಘಾಟಿಸಿದರು. ಇದೇ ಸಂದರ್ಭ 200 ಗ್ರಾಂ, 400 ಗ್ರಾಂ ತೂಕದ ನಂದಿನಿ ಸೆಟ್ ಮೊಸರು, 5 ಕೆ.ಜಿ. ಮತ್ತು 10 ಕೆ.ಜಿ. ತೂಕದ ಬಕೆಟ್ ಮೊಸರು ಉತ್ಪನ್ನಗಳ ಬಿಡುಗಡೆಯೂ ನಡೆಯಿತು.

‘ಗ್ರಾಹಕರಿಗೆ ನಂದಿನಿ ಹಾಲಿನ ಗುಣಮಟ್ಟದ ಉತ್ಪನ್ನಗಳನ್ನು ದಿನದ 24 ಗಂಟೆಯೂ ಒದಗಿಸುವ ಉದ್ದೇಶದಿಂದ ಬೃಹತ್ ನಂದಿನಿ ಮಿಲ್ಕ್ ಗ್ಯಾಲಕ್ಸಿ ಕಟ್ಟಡ ನಿರ್ಮಿಸಲಾಗಿದೆ. ಇಲ್ಲಿ ನಂದಿನಿ ಹಾಲು, ಮೊಸರು, ತುಪ್ಪ, ವಿವಿಧ ರೀತಿಯ ಪೇಡಾ, ಮೈಸೂರು ಪಾಕ್, ಚಕ್ಕುಲಿ, ಕೋಡುಬಳೆ, ಲಸ್ಸಿ, ಮಿಲ್ಕ್ ಪೌಡರ್, ಚಾಕೊಲೇಟ್, ಬಿಸ್ಕೆಟ್ಸ್ ಸೇರಿದಂತೆ 58 ರೀತಿಯ ಉತ್ಪನ್ನಗಳು ದೊರೆಯಲಿವೆ’ ಎಂದು ಸಿದ್ದೇಗೌಡ ಹೇಳಿದರು.

‘ದೊಡ್ಡ, ದೊಡ್ಡ ಕಾರ್ಯಕ್ರಮಗಳಲ್ಲಿ ಮೊಸರು ಹೆಚ್ಚಿನ ಪ್ರಮಾಣದಲ್ಲಿ ಬೇಕಾಗುತ್ತದೆ. ಆದರೆ, ಈ ಸಂದರ್ಭ ಪ್ಯಾಕೇಟ್‍ಗಳಲ್ಲಿ ನೀಡಿದರೆ, ಪ್ಲಾಸ್ಟಿಕ್ ತ್ಯಾಜ್ಯ ಹೆಚ್ಚಾಗುವ ಕಾರಣ ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ 10 ಕೆ.ಜಿ, 5 ಕೆ.ಜಿ.ಯ ಬೃಹತ್ ಡಬ್ಬಗಳಲ್ಲಿ ಒದಗಿಸುವ ಕಾರ್ಯವನ್ನು ಒಕ್ಕೂಟದಿಂದ ಮಾಡಲಾಗುತ್ತಿದೆ’ ಎಂದು ತಿಳಿಸಿದರು.

ಆಡಳಿತ ಮಂಡಳಿಯ ನಿರ್ದೇಶಕರಾದ ಕೆ.ಸಿ.ಬಲರಾಮ್, ಕೆ.ಎಸ್.ಕುಮಾರ್, ವಿ.ಟೊ.ಸೋಮಶೇಖರ್, ಈರೇಗೌಡ, ಪ್ರಸನ್ನ, ಎಸ್.ಸಿ.ಅಶೋಕ್, ಕೆ.ಜಿ.ಮಹೇಶ್, ಲೀಲಾ ದಾಕ್ಷಾಯಿಣಿ, ಮಾರುಕಟ್ಟೆ ವ್ಯವಸ್ಥಾಪಕ ಕೆ.ರಾಜ್‍ಕುಮಾರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು