ಬುಧವಾರ, ಅಕ್ಟೋಬರ್ 21, 2020
21 °C
ಡಿಕೆಶಿ ಮನೆ ಮೇಲಿನ ದಾಳಿ ರಾಜಕೀಯ ಪ್ರೇರಿತ: ಲಕ್ಷ್ಮಣ ಟೀಕೆ

ಬಿಜೆಪಿಯವರ ಮನೆ ಮೇಲೆ ದಾಳಿ ನಡೆಸಲಿ: ಕಾಂಗ್ರೆಸ್‌ ವಕ್ತಾರ ಎಂ.ಲಕ್ಷ್ಮಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಸಿಬಿಐ ಅಧಿಕಾರಿಗಳು ಬಿಜೆಪಿಯವರ ಮನೆ ಮೇಲೆ ದಾಳಿ ನಡೆಸಲಿ. ಕೋಟಿ ಕೋಟಿ ಅಕ್ರಮ ಹಣ ಸಿಗುವುದು ಖಚಿತ ಎಂದು ಕಾಂಗ್ರೆಸ್‌ ವಕ್ತಾರ ಎಂ.ಲಕ್ಷ್ಮಣ ಹೇಳಿದರು.

‘ಚುನಾವಣೆ ಸಮಯದಲ್ಲಿ ಕಾಂಗ್ರೆಸ್‌ ಮುಖಂಡರ ಮನೆ ಮೇಲೆ ಮಾತ್ರ ದಾಳಿ ನಡೆಸಲಾಗುತ್ತದೆ. ಸಿಬಿಐ ಎಂಬುದು ಚೋರ್‌ ಬಚಾವ್‌ ಇನ್ವೆಸ್ಟಿಗೇಷನ್‌ ಆಗಿದೆ. ಪ್ರಧಾನಿ ನರೇಂದ್ರ ಮೋದಿಯವರೇ ನಿಮಗೆ ನೈತಿಕತೆಯಿದ್ದರೆ ಮೊದಲು ಬಿಜೆಪಿ ಮುಖಂಡರ ಹಗರಣಗಳನ್ನು ತನಿಖೆಗೆ ಒಳಪಡಿಸಿ’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಸವಾಲು ಹಾಕಿದರು.

ಡಿಕೆಶಿ ಮನೆ ಮೇಲೆ ನಡೆದಿರುವ ದಾಳಿ ರಾಜಕೀಯ ಪ್ರೇರಿತ ಎಂಬುದು ಸ್ಪಷ್ಟ. ವಿರೋಧ ಪಕ್ಷಗಳ ಧ್ವನಿ
ಯನ್ನು ಅಡಗಿಸುವ ಕೆಲಸವನ್ನು ಇಡಿ, ಸಿಬಿಐ ಸಂಸ್ಥೆಗಳ ಮೂಲಕ ಬಿಜೆಪಿಯವರು ಮಾಡುತ್ತಿದ್ದಾರೆ. ಇಂತಹ ನೂರಲ್ಲ, ಸಾವಿರಾರು ದಾಳಿ ನಡೆದರೂ ಕಾಂಗ್ರೆಸ್‌ ಪಕ್ಷದವರು ಹೆದರಲ್ಲ ಎಂದು ಅವರು ಹರಿಹಾಯ್ದರು.

‘ಸಿಬಿಐ ಅಧಿ ಕಾರಿಗಳು ನನ್ನ ಜತೆ ಬಿಜೆಪಿಯವರ ಮನೆಗೆ ಬರಲಿ. ಕೆಲವರ ಮನೆಗಳಲ್ಲಿ ಮೆಷಿನ್‌ನಲ್ಲಿ ಎಣಿಸಲು ಆಗದಷ್ಟು ದುಡ್ಡು ಇದೆ. ತೂಕ ಮಾಡಿ ಲೆಕ್ಕ ಹಾಕುತ್ತಿದ್ದಾರೆ. ಅಷ್ಟೊಂದು ದುಡ್ಡು ಕೂಡಿಹಾಕಿದ್ದಾರೆ. ಅವರ ಮನೆಗಳಿಗೆ ದಾಳಿ ನಡೆಸಿ’ ಎಂದರು.

ಜನಸಾಮಾನ್ಯರ ಸುಲಿಗೆ ನಿಲ್ಲಲಿ: ಮಾಸ್ಕ್‌ ಧರಿಸದವರಿಗೆ ₹ 1000 ದಂಡ ವಿಧಿಸಿ ಸರ್ಕಾರ ಸುಲಿಗೆ ಮಾಡಲು ಹೊರಟಿರುವುದು ನಾಚಿಕೆ ಉಂಟುಮಾಡು ತ್ತಿದೆ. ಕೊರೊನಾ ಸಂಕಷ್ಟದಿಂದಾಗಿ ಜನರು ಒಂದು ಹೊತ್ತಿನ ಊಟಕ್ಕೂ ಕಷ್ಟ
ಪಡುತ್ತಿದ್ದಾರೆ. ಭಾರಿ ದಂಡ ವಿಧಿ ಸುವ ನಿರ್ಧಾ ರವನ್ನು ಸರ್ಕಾರ ವಾಪಸ್‌ ಪಡೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್‌ ನಗರಾಧ್ಯಕ್ಷ ಆರ್‌.ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಕೆಪಿಸಿಸಿ ವಕ್ತಾರೆ ಮಂಜುಳಾ ಮಾನಸ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು