ಕೇಂದ್ರ ಸರ್ಕಾರದಿಂದ ಇಂಧನ ಬೆಲೆ ಇಳಿಕೆ ನಾಟಕ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ

7

ಕೇಂದ್ರ ಸರ್ಕಾರದಿಂದ ಇಂಧನ ಬೆಲೆ ಇಳಿಕೆ ನಾಟಕ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ

Published:
Updated:
Deccan Herald

ಮೈಸೂರು: ಕೇಂದ್ರ ಸರ್ಕಾರವು ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯನ್ನು ಇಳಿಸುವ ಕಪಟ ನಾಟಕದಲ್ಲಿ ತೊಡಗಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಕಿಡಿಕಾರಿದ್ದಾರೆ.

ನಾಲ್ಕು ದಿನಗಳ ಹಿಂದೆ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಪೆಟ್ರೋಲ್‌ ಹಾಗೂ ಡೀಸೆಲ್‌ ಮೇಲಿನ ಸುಂಕವನ್ನು ₹ 2.5 ಇಳಿಸಿ, ಪೆಟ್ರೋಲ್‌ ಬೆಲೆಯನ್ನು ಲೀಟರಿಗೆ 85 ಪೈಸೆ, ಡೀಸೆಲ್‌ ಬೆಲೆಯನ್ನು ₹ 1.16 ಏರಿಸಿರುವುದು ಕೇಂದ್ರ ಸರ್ಕಾರದ ನಾಟಕದ ಭಾಗ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಬ್ಯಾರೆಲ್ಲಿಗೆ 86.74 ಡಾಲರಿನಿಂದ 83 ಡಾಲರಿಗೆ ಇಳಿಸಿದ್ದರೂ ಇಂಧನ ಬೆಲೆಯನ್ನು ಮಾತ್ರ ಇಳಿಸಿಯೇ ಇಲ್ಲ ಎಂದು ಟೀಕಿಸಿದ್ದಾರೆ.

2014ರಲ್ಲಿ ಯುಪಿಎ ಸರ್ಕಾರವು ಲೀಟರ್ ಪೆಟ್ರೋಲಿಗೆ ₹ 9.5 ಎಕ್ಸೈಸ್ ಸುಂಕ ವಿಧಿಸಿತ್ತು. ಆದರೆ, ಈಗಿನ ಎನ್‌ಡಿಎ ಸರ್ಕಾರ ₹ 19.48 ಸುಂಕ ವಿಧಿಸಿದೆ. ಅಂತೆಯೇ, ಡೀಸೆಲ್‌ ಮೇಲೆ ₹ 15.33 ಸುಂಕ ವಿಧಿಸಿದೆ. ₹ 400 ಇದ್ದ ಅಡುಗೆ ಅನಿಲ ಬೆಲೆ ಈಗ ₹ 900ಕ್ಕೆ ಏರಿದೆ ಎಂದಿದ್ದಾರೆ.

ಅಲ್ಲದೇ, 29 ದೇಶಗಳಿಗೆ ಭಾರತವು ಪೆಟ್ರೋಲನ್ನು ₹ 34ಕ್ಕೆ ಮಾರಾಟ ಮಾಡುತ್ತಿರುವುದು ಹೇಗೆ ಎಂಬುದು ಅಚ್ಚರಿಯ ವಿಚಾರ. ಜನರ ಬದುಕನ್ನು ಹಾಳು ಮಾಡುವ ಕೆಲಸವನ್ನು ಕೇಂದ್ರ ಸರ್ಕಾರ ನಿಲ್ಲಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !