ಯೂನಿಟ್‌ಗೆ 99.56 ಪೈಸೆ ಹೆಚ್ಚಳ; ಸೆಸ್ಕ್‌ ಪ್ರಸ್ತಾವ

7

ಯೂನಿಟ್‌ಗೆ 99.56 ಪೈಸೆ ಹೆಚ್ಚಳ; ಸೆಸ್ಕ್‌ ಪ್ರಸ್ತಾವ

Published:
Updated:

ಮೈಸೂರು: ವಿದ್ಯುತ್‌ ಶುಲ್ಕ ಪ್ರತಿ ಯೂನಿಟ್‌ಗೆ 99.56 ಪೈಸೆ ಹೆಚ್ಚಿಸುವಂತೆ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ನಿಯಮಿತ (ಸೆಸ್ಕ್‌) ಪ್ರಸ್ತಾವ ಇಟ್ಟಿದೆ.

ವಿದ್ಯುತ್‌ ದರ ಪರಿಷ್ಕರಣೆ ಅರ್ಜಿ ಕುರಿತಂತೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ (ಕೆಇಆರ್‌ಸಿ) ಅಧ್ಯಕ್ಷ ಶಂಭು ದಯಾಳ್‌ ಮೀನ ನೇತೃತ್ವದಲ್ಲಿ ಮಂಗಳವಾರ ಸಾರ್ವಜನಿಕ ವಿಚಾರಣಾ ಸಭೆ ನಡೆಯಿತು.

2019–20ರ ಸಾಲಿನ ಕಂದಾಯ ಕೊರತೆ ಒಟ್ಟು ₹ 630.74 ಕೋಟಿಗಳಾಗಿದ್ದು, ಅದನ್ನು ಭರಿಸಲು ದರ ಏರಿಕೆ ಅನಿವಾರ್ಯ ಎಂದು ಸೆಸ್ಕ್‌ ವ್ಯವಸ್ಥಾಪಕ ನಿರ್ದೇಶಕ ಡಾ.ಎಚ್‌.ಎನ್‌.ಗೋಪಾಲಕೃಷ್ಣ ಸಭೆಯಲ್ಲಿ ತಿಳಿಸಿದರು.

2020ರ ಕಂದಾಯ ಕೊರತೆ ₹ 407.71 ಕೋಟಿಗಳಾಗಿದ್ದು, ರೆಗ್ಯುಲೇಟರಿ ಅಸೆಟ್‌ ₹ 224.79 ಕೋಟಿ ಸೇರಿ ಒಟ್ಟು ಕೊರತೆ ₹ 632.50 ಕೋಟಿ ಆಗಿದೆ. ಇದರಲ್ಲಿ 2017–18ರ ಸಾಲಿನ ನಿವ್ವಳ ಲಾಭ ₹ 1.76 ಕೋಟಿ ಕಳೆದರೆ ಕೊರತೆ ₹ 630.74 ಕೋಟಿಗಳಷ್ಟಾಗುತ್ತದೆ ಎಂದು ವಿವರಿಸಿದರು.

ಸೆಸ್ಕ್‌ ವ್ಯಾಪ್ತಿಗೆ ಬರುವ ಐದು ಜಿಲ್ಲೆಗಳಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಿದ್ದು, ವಿದ್ಯುತ್‌ ಬೇಡಿಕೆಯ ಪ್ರಮಾಣದಲ್ಲೂ ಏರಿಕೆಯಾಗಿದೆ. ಎಲ್ಲ ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳಿಗೆ ವಿದ್ಯುತ್‌ ಸರಬರಾಜು ಮಾಡಲು ಭರಿಸಿದ ವಿದ್ಯುತ್‌ ಖರೀದಿ ವೆಚ್ಚ ಆಯೋಗದ ಅನುಮೋದಿತ ವೆಚ್ಚಕ್ಕಿಂತ ಅಧಿಕವಾಗಿರುವುದು ಕಂದಾಯ ಕೊರತೆ ಹೆಚ್ಚಲು ಕಾರಣ. ಕಂಪನಿ ನಷ್ಟದ ಹಾದಿ ಹಿಡಿಯುವುದನ್ನು ತಪ್ಪಿಸಲು ಬೆಲೆ ಏರಿಕೆ ಮಾಡಬೇಕಿದೆ ಎಂದು ಹೇಳಿದರು.

ಪ್ರಸ್ತಾವಕ್ಕೆ ವಿರೋಧ: ಸಭೆಯಲ್ಲಿ ಹಾಜರಿದ್ದ ಕೈಗಾರಿಕೆಗಳು, ಸಂಘ ಸಂಸ್ಥೆಗಳು, ರೈತ ಸಂಘದ ಪ್ರತಿನಿಧಿಗಳು ಮತ್ತು ಸಾರ್ವಜನಿಕರು ಬೆಲೆ ಹೆಚ್ಚಳ ಪ್ರಸ್ತಾವವನ್ನು ವಿರೋಧಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !