ಸಿಇಟಿ: ಮೈಸೂರಿನ ಇಬ್ಬರ ಸಾಧನೆ

ಬುಧವಾರ, ಜೂನ್ 19, 2019
26 °C

ಸಿಇಟಿ: ಮೈಸೂರಿನ ಇಬ್ಬರ ಸಾಧನೆ

Published:
Updated:

ಮೈಸೂರು: ‘ಸಿಇಟಿ’ ಫಲಿತಾಂಶದಲ್ಲಿ ಮೈಸೂರಿನ ಇಬ್ಬರು ವಿದ್ಯಾರ್ಥಿಗಳು ಟಾಪ್ 10 ಒಳಗೆ ರ‍್ಯಾಂಕ್ ಗಳಿಸಿದ್ದಾರೆ.

ನಗರದ ಬೇಸ್ ಪಿಯು ಕಾಲೇಜಿನ ವಿದ್ಯಾರ್ಥಿ ವಿ.ವಾಸುದೇವ ಅವರು ಯೋಗ ವಿಜ್ಞಾನದಲ್ಲಿ 2ನೇ ರ‍್ಯಾಂಕ್‌ ಪಡೆಸಿದ್ದಾರೆ. ಜತೆಗೆ, ಔಷಧ ವಿಜ್ಞಾನದಲ್ಲಿ 7ನೇ, ಬಿಎಸ್ಸಿ ಕೃಷಿ ವಿಜ್ಞಾನದಲ್ಲಿ 13ನೇ, ಪಶು ವಿಜ್ಞಾನದಲ್ಲಿ 4ನೇ, ಬಿ-ಫಾರ್ಮ ಹಾಗೂ ಡಿ-ಫಾರ್ಮಾದಲ್ಲಿ 7ನೇ ರ‍್ಯಾಂಕ್ ಪಡೆದಿದ್ದಾರೆ‌.

‘ಫಲಿತಾಂಶ ಸಂತಸ ನೀಡಿದೆ. ನಾನು ನೀಟ್‌ ಫಲಿತಾಂಶಕ್ಕಾಗಿ ಕಾದಿದ್ದೇನೆ. ವೈದ್ಯಕೀಯ ಶಿಕ್ಷಣ ಪಡೆಯುವುದು ಆಸೆಯಾಗಿದೆ’ ಎಂದು ವಾಸುದೇವ ‘ಪ್ರಜಾವಾಣಿ’ಗೆ ತಿಳಿಸಿದರು.

ರಾಮಕೃಷ್ಣ ವಿದ್ಯಾಶಾಲೆ ಪಿಯು ಕಾಲೇಜಿನ ವಿದ್ಯಾರ್ಥಿ ರೋಹಿತ್ ರಾಜ್ ಅವರು ಬಿಎಸ್ಸಿ ಕೃಷಿ ವಿಜ್ಞಾನದಲ್ಲಿ 6ನೇ ರ‍್ಯಾಂಕ್ ಪಡೆದಿದ್ದಾರೆ. ಇವರು ಕೃಷಿ ವಿಜ್ಞಾನದಲ್ಲಿ ಮುಂದುವರೆಯುವ ಇಂಗಿತ ವ್ಯಕ್ತಪಡಿಸಿದರು.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ (http://kea.kar.nic.in) ಸೇರಿಂದಂತೆ http://cet.kar.nic.inhttp://karresults.nic.in ವೆಬ್‌ಸೈಟ್‌ಗಳಲ್ಲೂ  ಫಲಿತಾಂಶ ನೋಡಬಹುದು. 

ಈ ಬಾರಿ 1.90 ಲಕ್ಷಕ್ಕೂ ಅಧಿಕ ಮಂದಿ ನೋಂದಣಿ ಮಾಡಿಕೊಂಡಿದ್ದು, ಶೇ 92ರಷ್ಟು ಮಂದಿ ಪರೀಕ್ಷೆ ಬರೆದಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !