ಸರಗಳವಿಗೆ ಯತ್ನ

ಶುಕ್ರವಾರ, ಏಪ್ರಿಲ್ 19, 2019
27 °C

ಸರಗಳವಿಗೆ ಯತ್ನ

Published:
Updated:

ಮೈಸೂರು: ಇಲ್ಲಿನ ಯಾದವಗಿರಿಯಲ್ಲಿ ರಸ್ತೆ ಬದಿ ನಿಂತಿದ್ದ ಮಹಿಳೆಯೊಬ್ಬರಿಂದ ಸರಗಳವು ಮಾಡಲು ಇಬ್ಬರು ಕಳ್ಳರು ಯತ್ನಿಸಿದ್ದಾರೆ.

ಜಯಲಕ್ಷ್ಮಿ (60) ಎಂಬುವವರು ರಸ್ತೆ ಬದಿ ಪರಿಚಯಸ್ಥರೊಂದಿಗೆ ಮಾತನಾಡುತ್ತಾ ನಿಂತಿದ್ದಾಗ ಬೈಕ್‌ನಲ್ಲಿ ಬಂದ ಇಬ್ಬರು ಸರವನ್ನು ಕಿತ್ತುಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಮಹಿಳೆಯು ಸರವನ್ನು ಬಲವಾಗಿ ಹಿಡಿದುಕೊಂಡಿದ್ದಾರೆ. ಇದರಿಂದ ಸರ ಕಳ್ಳರ ಕೈ ಸೇರಿಲ್ಲ. ಕಳ್ಳರಲ್ಲಿ ಒಬ್ಬಾತ ಹೆಲ್ಮೆಟ್ ಹಾಕಿದ್ದರೆ, ಮತ್ತೊಬ್ಬ ಹಾಕಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ವಿ.ವಿ.ಪುರಂ ಠಾಣೆಯಲ್ಲಿ ದಾಖಲಾಗಿದೆ.

ವ್ಯಕ್ತಿ ಶವ ಪತ್ತೆ

ಮೈಸೂರು- ಚಾಮರಾಜನಗರ ರೈಲು ನಿಲ್ದಾಣಗಳ ನಡುವೆ ಸುಮಾರು 30-35 ವರ್ಷದ ಪುರುಷ ವ್ಯಕ್ತಿಯ ಮೃತದೇಹವು ಪತ್ತೆಯಾಗಿದೆ. 5.6 ಅಡಿ ಎತ್ತರ, ಕೋಲು ಮುಖ, ಗೋಧಿ ಮೈಬಣ್ಣ, ಸಾಧಾರಣ ಶರೀರ, ಕೆಂಪು, ಬಿಳಿ ಕಪ್ಪು ಬಣ್ಣದ ಚೆಕ್ಸ್‌ವುಳ್ಳ ತುಂಬು ತೋಳಿನ ಶರ್ಟ್ ಧರಿಸಿದ್ದಾರೆ.

ಮೃತದೇಹವನ್ನು ಕೆ.ಆರ್.ಆಸ್ಪತ್ರೆಯ ಶವಗಾರದಲ್ಲಿ ಇಡಲಾಗಿದೆ. ಗುರುತು ಪತ್ತೆಯಾದವರು ದೂ: 0821-2516579 ನ್ನು ಸಂಪರ್ಕಿಸಲು ಪ್ರಕಟಣೆ ಕೋರಿದೆ.

ಆತ್ಮಹತ್ಯೆ

ಇಲ್ಲಿನ ಕೃಷ್ಣಮೂರ್ತಿಪುರಂ ನಿವಾಸಿ ಮದನ್ ಮೋಹನ್ (58) ಮಂಗಳವಾರ ಮಧ್ಯಾಹ್ನ ತಮ್ಮ ನಿವಾಸದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇದಕ್ಕೂ ಮುನ್ನ ಅವರು ಡೆತ್‌ನೋಟ್‌ ಬರೆದಿಟ್ಟಿದ್ದು, ಅದರಲ್ಲಿ ಚೆನ್ನೈನ ಅರುಣ್‌ಕುಮಾರ್, ನಂದಕಿಶೋರ್, ಶ್ರೀನಿವಾಸ್ ಪ್ರಸಾದ್, ತಾರಾನಾಥ್ ಹಾಗೂ ಇತರರು ಹಣದ ವಿಚಾರದಲ್ಲಿ ಮೋಸ ಮಾಡಿದ್ದು, ಇದರಿಂದ ನೊಂದು ನೇಣು ಹಾಕಿಕೊಳ್ಳುತ್ತಿರುವುದಾಗಿ ಬರೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಲಕ್ಷ್ಮಿಪುರಂ ಠಾಣೆಯಲ್ಲಿ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !