ಸರಗಳ್ಳರ ಬೃಹತ್ ಜಾಲ ಭೇದಿಸಿದ ಪೊಲೀಸರು

7
ಮೈಸೂರು ಗ್ರಾಮಾಂತರ ವಿಭಾಗದ ಪೊಲೀಸರ ಭರ್ಜರಿ ಕಾರ್ಯಾಚರಣೆ

ಸರಗಳ್ಳರ ಬೃಹತ್ ಜಾಲ ಭೇದಿಸಿದ ಪೊಲೀಸರು

Published:
Updated:
Deccan Herald

ಮೈಸೂರು: ಸರಗಳ್ಳರ ಬೃಹತ್ ಜಾಲ ಭೇದಿಸಿರುವ ಮೈಸೂರು ಗ್ರಾಮಾಂತರ ವಿಭಾಗದ ಪೊಲೀಸರು ನಾಲ್ವರನ್ನು ಬಂಧಿಸಿ, ₹ 15 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.‌

ದೇವರಾಮು, ಅಯೂಬ್‌, ಸದ್ದಾಂ ಹಾಗೂ ಮಹಮ್ಮದ್ ಅಫೀಜ್ ಬಂಧಿತರು. ಇವರು ಕೇವಲ ಮೈಸೂರು ಮಾತ್ರವಲ್ಲದೆ ಮಂಡ್ಯ, ಹಾಸನ, ಶಿವಮೊಗ್ಗದಲ್ಲಿಯೂ ಸರಗಳವು ನಡೆಸಿದ್ದರು. ಅರ್ಧ ಕೆ.ಜಿಗೂ ಅಧಿಕ ಚಿನ್ನಾಭರಣಗಳು ಹಾಗೂ ಕಳವು ಮಾಡಿದ್ದ 2 ಬೈಕ್‌ಗಳನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬೈಕ್‌ಗಳನ್ನು ಕಳವು ಮಾಡಿ ಆ ಬೈಕ್‌ಗಳನ್ನೇ ಕಳ್ಳತನಕ್ಕೆ ಬಳಸುತ್ತಿದ್ದರು. ಪ್ರಮುಖ ಆರೋಪಿ ಅಯೂಬ್ ಕಳವು ನಡೆಸಿ ಸ್ವಲ್ಪ ದೂರದಲ್ಲಿದ್ದ ಮತ್ತೊಬ್ಬನಿಗೆ ಸರ ಕೊಟ್ಟು ಪರಾರಿಯಾಗುತ್ತಿದ್ದ. ಕದ್ದ ಚಿನ್ನಾಭರಣಗಳನ್ನು ಮಹಮ್ಮದ್ ಅಫೀಜ್ ಎಂಬಾತನಿಗೆ ಮಾರಾಟ ಮಾಡುತ್ತಿದ್ದರು. ಈತನಿಗೆ ಚಿನ್ನಾಭರಣಗಳು ಕಳವು ಮಾಡಿದ್ದವು ಎಂಬುದು ಗೊತ್ತಿದ್ದರೂ ಖರೀದಿಸುತ್ತಿದ್ದ ಎಂದು ಮೂಲಗಳು ತಿಳಿಸಿವೆ.

ಒಟ್ಟು 13 ಕಡೆ ಸರಗಳವು ನಡೆಸಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಈಚೆಗೆ ಸರಗಳವು ಅಧಿಕವಾಗಿತ್ತು. ಕಳ್ಳರ ಪತ್ತೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್‌ಸಿಂಗ್ ಅವರು ಎಎಸ್‌ಪಿ ಅರುಣಾಂಶುಗಿರಿ ಅವರ ಸಾರಥ್ಯದಲ್ಲಿ ವಿಶೇಷ ತಂಡ ರಚಿಸಿದ್ದರು. ಇದರ ಉಸ್ತುವಾರಿಯನ್ನು ಸಿಪಿಐ ಕರೀಂರಾವ್ ವಹಿಸಿದ್ದು, ಪಿಎಸ್‌ಐಗಳಾದ ಜಯಪ್ರಕಾಶ್, ಸಂದೀಪ್‌ಕುಮಾರ್, ಮುದ್ದು ಮಾದೇವ, ಸಿಬ್ಬಂದಿ ಕೃಷ್ಣಮೂರ್ತಿ, ಪ್ರಭಾಕರ, ಜ್ಹೌರ್‌ ಅಹಮ್ಮದ್, ಮಂಜು, ಹರೀಶ್, ಅಶೋಕ, ಪ್ರಭಾಕರ, ಮಹೇಶ್, ನಾರಾಯಣ, ಪ್ರಭಾಕರ, ರವಿ, ಭಾಸ್ಕರ, ರಂಗಸ್ವಾಮಿ, ಶಿವಣ್ಣ ಹಾಗೂ ಅಭಿಷೇಕ್ ತಂಡದಲ್ಲಿದ್ದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !