ಚಾಮುಂಡೇಶ್ವರಿ ದೇಗುಲಕ್ಕೆ ₹ 33.30 ಕೋಟಿ ಆದಾಯ

ಶನಿವಾರ, ಏಪ್ರಿಲ್ 20, 2019
31 °C

ಚಾಮುಂಡೇಶ್ವರಿ ದೇಗುಲಕ್ಕೆ ₹ 33.30 ಕೋಟಿ ಆದಾಯ

Published:
Updated:
Prajavani

ಮೈಸೂರು: ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇಗುಲಕ್ಕೆ 2018–19ರ ಸಾಲಿನಲ್ಲಿ ವಿವಿಧ ಮೂಲಗಳಿಂದ ಒಟ್ಟು ₹ 33.30 ಕೋಟಿ ಆದಾಯ ಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ₹ 3.35 ಕೋಟಿಯಷ್ಟು ಆದಾಯ ಹೆಚ್ಚಳವಾಗಿದೆ.

ಹುಂಡಿ ಹಣ, ಪ್ರವೇಶ ಶುಲ್ಕ, ಡಿಡಿ, ಮನಿ ಆರ್ಡರ್‌ ಮೂಲಕ ಬರುವ ಕಾಣಿಕೆ, ದೇಗುಲದ ವಿವಿಧ ಗುತ್ತಿಗೆ ಹಣ, ಲಾಡು ಪ್ರಸಾದ ಮಾರಾಟ, ವಿವಿಧ ಸೇವಾರ್ಥಗಳು, ಸೀರೆಗಳ ಹರಾಜು, ವಿಶೇಷ ಪೂಜೆ, ಅತಿಥಿಗೃಹ ಬಾಡಿಗೆ, ದಾಸೋಹ ಭವನದ ಸೇವಾ ಕಾಣಿಕೆ, ಇ–ಸೇವೆಗಳಿಂದ ದೇವಾಲಯಕ್ಕೆ ಆದಾಯ ಸಂಗ್ರಹವಾಗುತ್ತಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಹುಂಡಿಗಳ ಕಾಣಿಕೆಯಿಂದ ಈ ಬಾರಿ ₹ 1.32ರಷ್ಟು ಅಧಿಕ ಹಣ ಸಂಗ್ರಹವಾಗಿದೆ. 2017–18 ರಲ್ಲಿ ಹುಂಡಿಗಳಲ್ಲಿ ಒಟ್ಟು ₹ 10.25 ಕೋಟಿ ಸಂಗ್ರಹವಾಗಿತ್ತು.

ಲಾಡು ಪ್ರಸಾದ ಮಾರಾಟದಿಂದ ಮತ್ತು ಸೀರೆಗಳ ಹರಾಜಿನಿಂದ ಕಳೆದ ಬಾರಿಗಿಂತ ಕ್ರಮವಾಗಿ ₹ 25 ಲಕ್ಷ ಹಾಗೂ ₹ 7 ಲಕ್ಷದಷ್ಟು ಹೆಚ್ಚು ಆದಾಯ ಸಂಗ್ರಹವಾಗಿದೆ.

ದೇಗುಲದ ಹೆಸರಿನಲ್ಲಿ ವಿವಿಧ ಬ್ಯಾಂಕುಗಳಲ್ಲಿ ಒಟ್ಟು ₹ 81.78 ಕೋಟಿ ಠೇವಣಿ ಇಡಲಾಗಿದೆ ಎಂದು ದೇಗುಲದ ಪ್ರಕಟಣೆ ತಿಳಿಸಿದೆ.

ಏರಿಕೆ ಪ್ರಮಾಣ ಕಡಿಮೆ: ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಆದಾಯ ಏರಿಕೆಯ ಪ್ರಮಾಣ ಕಡಿಮೆಯಾಗಿದೆ. 2016–17 ರಲ್ಲಿ ₹ 24.09 ಕೋಟಿ ಆದಾಯ ಇತ್ತು. ಕಳೆದ ವರ್ಷ ₹ 6 ಕೋಟಿಯಷ್ಟು ಹೆಚ್ಚಳವಾಗಿ ₹29.95 ಕೋಟಿ ಸಂಗ್ರಹವಾಗಿತ್ತು.

ಕಳೆದ ಐದು ವರ್ಷಗಳ ಆದಾಯದ ವಿವರ (₹ ಕೋಟಿಗಳಲ್ಲಿ)

ವರ್ಷ;   ಆದಾಯ

2014–15;18.33

2015–16;21.74

2016–17;24.09

2017–18;29.95

2018–19;33.30

ಅಂಕಿ–ಅಂಶ

₹11.57 ಕೋಟಿ ಹುಂಡಿಗಳಿಂದ ಬಂದ ಆದಾಯ

₹ 10.52 ಕೋಟಿ ಪ್ರವೇಶ ಶುಲ್ಕದಿಂದ ಬಂದ ಹಣ

₹ 3.83 ಕೋಟಿ ಲಾಡು ಪ್ರಸಾದ ಮಾರಾಟದಿಂದ ಬಂದ ಮೊತ್ತ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !