ಸೋಮವಾರ, ನವೆಂಬರ್ 18, 2019
23 °C

‘ಫೇಸ್‌ಬುಕ್‌’ನಲ್ಲಿ ಬಿಜೆಪಿ ಸಂಸದರಿಗೆ ನಿಂದನೆ; ಪ್ರಕರಣ ದಾಖಲು

Published:
Updated:

ಮೈಸೂರು: ಬಿಜೆಪಿ ಸಂಸದರಾದ ಪ್ರತಾಪಸಿಂಹ ಹಾಗೂ ತೇಜಸ್ವಿ ಸೂರ್ಯ ವಿರುದ್ಧ ಫೇಸ್‌ಬುಕ್‌ನಲ್ಲಿ ನಿಂದಿಸಿರುವ ಕುರಿತು ಇಲ್ಲಿನ ಕುವೆಂಪುನಗರ ನಿವಾಸಿ ಸತೀಶ್‌ಗೌಡ ಎಂಬುವವರ ವಿರುದ್ಧ ಅಶೋಕಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ತೇಜಸ್ವಿ ಸೂರ್ಯ ವಿರುದ್ಧದ ಪ್ರಕರಣ ಕೈಬಿಟ್ಟ ಆಯೋಗ

‘ರಾಜ್ಯದಲ್ಲಿ ಪ್ರವಾಹ ಬಂದಿರುವ ಹೊತ್ತಿನಲ್ಲಿ ಪ್ರತಾಪಸಿಂಹ ಹಾಗೂ ತೇಜಸ್ವಿ ಸೂರ್ಯ ಅವರು ಕೇಂದ್ರದಿಂದ ಹಣ ಬಿಡುಗಡೆ ಮಾಡಿಸಿಕೊಡುವ ಬದಲು ‘ಕನ್ನಡ ಕೋಟ್ಯಾಧಿಪತಿ’ ಸ್ಪರ್ಧೆಯಲ್ಲಿ ಹಣ ಗೆಲ್ಲಲು ಆಡುತ್ತಿದ್ದಾರೆ. ಇವರು ‘ಪೂರ್‌ ರಾಸ್ಕಲ್’ ಎಂದು ನಿಂದಿಸಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತ ನಾಗೇಂದ್ರ ಅವರು ದೂರು ನೀಡಿದ್ದಾರೆ.

ಇದನ್ನೂ ಓದಿ: ಅವಹೇಳನಕಾರಿ ಬರಹ: ಪ್ರಕಾಶ್ ರೈ ಕ್ಷಮೆ ಕೋರಿದ ಪ್ರತಾಪ್ ಸಿಂಹ

ಸೆಕ್ಷನ್ 504 ಅಡಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)