ಶನಿವಾರ, ಅಕ್ಟೋಬರ್ 24, 2020
26 °C
ನಂಜನಗೂಡು ನಗರಸಭೆ ಮೀಸಲಾತಿ ಪ್ರಕಟ: ಬಿಜೆಪಿಯಲ್ಲಿ ಲಾಬಿ ಶುರು

ನಂಜನಗೂಡು ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಗಾದಿಗೆ ಪೈಪೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಂಜನಗೂಡು: ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳಿಗೆ ರಾಜ್ಯ ಸರ್ಕಾರ ಮೀಸಲಾತಿ ಪ್ರಕಟಿಸಿದ್ದು, ನಂಜನಗೂಡು ನಗರಸಭೆಯ ಅಧ್ಯಕ್ಷ ಸ್ಥಾನ ಸಾಮಾನ್ಯ, ಉಪಾಧ್ಯಕ್ಷರ ಸ್ಥಾನಕ್ಕೆ ಸಾಮಾನ್ಯ ಮಹಿಳೆಗೆ ನಿಗಧಿಯಾಗಿದೆ.

31 ಸ್ಥಾನದ ನಗರಸಭೆಯಲ್ಲಿ ಬಿ.ಜೆ.ಪಿ. 15, ಕಾಂಗ್ರೆಸ್ 10, ಜೆಡಿಎಸ್ 3 ಹಾಗೂ 3 ಮಂದಿ ಪಕ್ಷೇತರ ಅಭ್ಯರ್ಥಿಗಳು ಆಯ್ಕೆಯಾಗಿದ್ದರು.

ನಗರಸಭೆ ಅಧಿಕಾರ ಹಿಡಿಯಲು 16 ಸ್ಥಾನಗಳ ಅವಶ್ಯಕತೆಯಿದ್ದು, ಬಿಜೆಪಿ 15 ಸ್ಥಾನದ ಜೊತೆಗೆ ಶಾಸಕ ಹಾಗೂ ಸಂಸದರಿಗೆ ಮತದಾನದ ಅವಕಾಶವಿರುವುದರಿಂದ 17 ಮತದೊಂದಿಗೆ ಬಿಜೆಪಿ ನಗರಸಭೆಯ ಅಧಿಕಾರ ಹಿಡಿಯುವುದು ಬಹುತೇಕ ಖಚಿತವಾಗಿದೆ.

ಅಧ್ಯಕ್ಷ ಸ್ಥಾನಕ್ಕೆ ಮಹಿಳೆ ಅಥವಾ ಪುರುಷರು ಸ್ಪರ್ಧಿಸಲು ಅವಕಾಶ ಇರುವುದರಿಂದ ಬಿಜೆಪಿ ಸದಸ್ಯರ ನಡುವೆ  ಪೈಪೋಟಿ ನಡೆಯಲಿದೆ. 24ನೇ ವಾರ್ಡ್‌ನ ಕ್ರಷರ್ ಮಹದೇವಸ್ವಾಮಿ, 7ನೇ ವಾರ್ಡ್‌ನ ಮಹದೇವ ಪ್ರಸಾದ್, 15 ನೇ ವಾರ್ಡ್‌ನ ಮಹದೇವಮ್ಮ ಬಾಲಚಂದ್ರ, 31ನೇ ವಾರ್ಡ್‌ನ ನಾಗಮಣಿ ಶಂಕರಪ್ಪ ನಡುವೆ ಪೈಪೋಟಿ ನಡೆಯಲಿದೆ ಎಂಬ ಲೆಕ್ಕಾಚಾರ ಶುರುವಾಗಿದೆ.

ಉಪಾಧ್ಯಕ್ಷ ಸ್ಥಾನವನ್ನು ಹಿಂದುಳಿದ ವರ್ಗದವರಿಗೆ ನೀಡುವುದಾದರೆ ಮಹದೇವಮ್ಮ ಬಾಲಚಂದ್ರ, ನಾಗಮಣಿ ಶಂಕರಪ್ಪ ಅಥವಾ ಪರಿಶಿಷ್ಟ ವರ್ಗದ ಮೀನಾಕ್ಷಿ ನಾಗರಾಜು ಸೇರಿದಂತೆ ಈ ಮೂವರು ಸದಸ್ಯರಲ್ಲಿ ಒಬ್ಬರಿಗೆ ಅವಕಾಶ ಸಿಗಲಿದೆ ಎನ್ನಲಾಗುತ್ತಿದೆ.

ಶಾಸಕ ಬಿ.ಹರ್ಷವರ್ಧನ್ ಮಾತನಾಡಿ, ‘ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರು ಬೆಂಗಳೂರಿನಲ್ಲಿದ್ದಾರೆ. ಮುಂದಿನ ವಾರ ಸಂಸದರ ಮೈಸೂರಿನ ಮನೆಯಲ್ಲಿ ಸಭೆ ನಡೆಸಿ, ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಅಂತಿಮ ಗೊಳಿಸಲಿದ್ದಾರೆ. ನಗರಸಭೆ ಯಲ್ಲಿ ನಮ್ಮ ಪಕ್ಷಕ್ಕೆ ಬಹುಮತ ಇರುವುದರಿಂದ, ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳು ಬಿಜೆಪಿಗೆ ಸಿಗಲಿವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು