ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾದಯಾತ್ರೆ ಹೆಸರಲ್ಲಿ ಕಾಂಗ್ರೆಸ್‌ನವರು ಮೋಜು ಮಾಡುತ್ತಿದ್ದಾರೆ: ಅಶೋಕ್

Last Updated 3 ಮಾರ್ಚ್ 2022, 12:16 IST
ಅಕ್ಷರ ಗಾತ್ರ

ಮೈಸೂರು: ‘ಉಕ್ರೇನ್‌ನಲ್ಲಿ ನಮ್ಮ ವಿದ್ಯಾರ್ಥಿಗಳು ತುತ್ತು ಅನ್ನಕ್ಕೆ ಪರದಾಡುತ್ತಿದ್ದಾರೆ. ಶಿವಮೊಗ್ಗದಲ್ಲಿ ನಡೆದ ಹಿಂದೂ ಕಾರ್ಯಕರ್ತನ ಹತ್ಯೆಯ ನೋವು ಇನ್ನೂ ಮಾಸಿಲ್ಲ. ಇಂತಹ ಸಮಯದಲ್ಲಿ ಕಾಂಗ್ರೆಸ್‌ನವರು ಪಾದಯಾತ್ರೆ ಹೆಸರಲ್ಲಿ ಮೋಜು ಮಾಡುತ್ತಿದ್ದಾರೆ’ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಕಿಡಿಕಾರಿದರು.

ಗುರುವಾರ ಇಲ್ಲಿ ಸುದ್ದಿಗಾರರ ಜತೆ ಮಾತನಾಡಿ, ‘ಜನವರಿಯಲ್ಲಿ ಪಾದಯಾತ್ರೆ ಮೂಲಕ ಕೋವಿಡ್‌ ಹಬ್ಬಿಸಿದ್ದ ಅವರು ಈಗ ಮತ್ತೆ ಶುರು ಮಾಡಿದ್ದಾರೆ. ಯುದ್ಧಭೂಮಿಯಲ್ಲಿ ಸಂಕಷ್ಟದಲ್ಲಿರುವ ಭಾರತೀಯರು ಇವರ ನೆನಪಿಗೆ ಬರುತ್ತಿಲ್ಲ. ಪಾದಯಾತ್ರೆ ಹೆಸರಲ್ಲಿ ಒಬ್ಬಟ್ಟು ಊಟ, ದಾರಿಯುದ್ದಕ್ಕೂ ಎಳನೀರು, ಪಾಯಸ, ಮಜ್ಜಿಗೆ, ಡೋಲು, ತಮಟೆ, ಸಿದ್ದರಾಮಯ್ಯ ಅವರ ನೃತ್ಯ... ಹೀಗೆ ನೋವಿನ ನಡುವೆಯೂ ಸಂಭ್ರಮಿಸುತ್ತಿದ್ದಾರೆ’ ಎಂದು ಟೀಕಿಸಿದರು.

‘ಪಾದಯಾತ್ರೆಯಿಂದ ಸಂಚಾರ ದಟ್ಟಣೆ ಉಂಟಾಗಿ ಜನಸಾಮಾನ್ಯರಿಂದ ಹಿಡಿದು ಹೈಕೋರ್ಟ್‌ ನ್ಯಾಯಾಧೀಶರವರೆಗೆ ಎಲ್ಲರಿಗೂ ಸಮಸ್ಯೆ ಆಗಿದೆ. ಬೆಂಗಳೂರಿನ ಜನರು ಶಾಪ ಹಾಕುತ್ತಿದ್ದು, ಅದರಿಂದಲೇ ಕಾಂಗ್ರೆಸ್‌ ಸರ್ವನಾಶ ಆಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT