ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರಿನಲ್ಲಿ ಕಾಂಗ್ರೆಸ್ ಸದಸ್ಯತ್ವ ಅಭಿಯಾನಕ್ಕೆ ಸತೀಶ ಜಾರಕಿಹೊಳಿ ಚಾಲನೆ

Last Updated 20 ನವೆಂಬರ್ 2021, 11:27 IST
ಅಕ್ಷರ ಗಾತ್ರ

ಮೈಸೂರು: ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ ಜಾರಕಿಹೊಳಿ ಹಾಗೂ ಆರ್.ಧ್ರುವನಾರಾಯಣ ಕಹಳೆ ಊದುವ ಮೂಲಕ ಮೈಸೂರು ಜಿಲ್ಲಾ ಕಾಂಗ್ರೆಸ್ ಸದಸ್ಯತ್ವ ಅಭಿಯಾನಕ್ಕೆ ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಶನಿವಾರ ಚಾಲನೆ ನೀಡಿದರು.

ನಂತರ ಮಾತನಾಡಿದ ಸತೀಶ್ ಜಾರಕಿಹೊಳಿ, ಇಂದಿರಾಗಾಂಧಿ ಅವರು ಇಡೀ ದೇಶಕ್ಕೆ ಆದರ್ಶ. ಅವರ ಆದರ್ಶವನ್ನು ಪಾಲನೆ ಮಾಡಬೇಕು ಎಂದು ಹೇಳಿದರು.ಅವರಿದ್ದಾಗ ಪಕ್ಷ ಗಟ್ಟಿಯಾಗಿತ್ತು. ಈಗ ಮತ್ತೆ ಆ ಮಟ್ಟಕ್ಕೆ ಪಕ್ಷ ಕಟ್ಟಬೇಕಿದೆ. ಇದಕ್ಕಾಗಿಯೇ ಸದಸ್ಯತ್ವ ಅಭಿಯಾನ ನಡೆಸಲಾಗುತ್ತಿದೆ ಎಂದರು.

ಆರ್.ಧ್ರುವನಾರಾಯಣ ಮಾತನಾಡಿ, ‘ಚೀನಾದ ಅತಿಕ್ರಮಣವನ್ನು ಎದುರಿಸುವ ಶಕ್ತಿ 56 ಇಂಚಿನ ಎದೆಯುಳ್ಳ ನಾಯಕನಿಗೆ ಇಲ್ಲ‌. ಆದರೆ, ಇಂದಿರಾಗಾಂಧಿ ಪಾಕಿಸ್ತಾನವನ್ನು ಇಬ್ಬಾಗ ಮಾಡಿದ್ದರು ಎಂದು ಹೇಳಿದರು. ರಾಜ್ಯದಲ್ಲಿ 54 ಲಕ್ಷ ಸದಸ್ಯರನ್ನು ಸೇರ್ಪಡೆ ಮಾಡಬೇಕು. ಒಂದು ವಿಧಾನ ಸಭಾ ಕ್ಷೇತ್ರದಲ್ಲಿ 25 ಸಾವಿರ ಮಂದಿಯನ್ನು ಸೇರ್ಪಡೆ ಮಾಡುವ ಗುರಿ ಹೊಂದಲಾಗಿದೆ ಎಂದರು.

ಸಿಂಧಗಿ ಕ್ಷೇತ್ರದಲ್ಲಿ ಪಕ್ಷದ ಬೂತ್ ಮಟ್ಟದ ಕಮಿಟಿಯೆ ಇರಲಿಲ್ಲ. ಈ ಬಗೆಯ ಸಂಘಟನೆ ಮಾಡಿದರೆ ಗೆಲುವು ಕಷ್ಟವಾಗಲಿದೆ ಎಂದು ಹೇಳಿದರು.ವಿಧಾನಪರಿಷತ್ ಚುನಾವಣೆಯಲ್ಲಿ ಪರಿಶಿಷ್ಟ ಜಾತಿಯ ಎಡಗೈ ಸಮುದಾಯಕ್ಕೆ ಟಿಕೆಟ್ ನೀಡಲು ಚಿಂತಿಸಲಾಗಿದೆ. ಇಂದು ಅಭ್ಯರ್ಥಿಯ ಅಂತಿಮ ಹೆಸರನ್ನು ಕೆಪಿಸಿಸಿಗೆ ಕಳುಹಿಸಲಾಗುವುದು ಎಂದು ಹೇಳಿದರು.

ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ, ಇಂದಿರಾಗಾಂಧಿ ಅವರ ಜೀವನ ಪುರುಷರಿಗೆ ಮಾದರಿ. ವಾಜಪೇಯಿ ಅವರಿಂದ ದುರ್ಗೆ ಎಂದು ಕರೆಸಿಕೊಂಡಿದ್ದರು ಎಂದು ಶ್ಲಾಘಿಸಿದರು.

ರಾಹುಲ್ ಗಾಂಧಿ ಕೇಂದ್ರದ ವಿರುದ್ಧ ರಣಕಹಳೆ ಊದಿದ್ದರು. ಇಂದು ಬಿಜೆಪಿ ರೈತರ ಎದುರು ಮಂಡಿಯೂರಿದೆ. ಇದು ಆರಂಭ ಎಂದರು.
ಪಕ್ಷದಲ್ಲಿ ಮಹಿಳೆಯರಿಗೂ ಪ್ರಾಧಾನ್ಯತೆ ನೀಡಬೇಕು. ಭಿತ್ತಿಚಿತ್ರಗಳಲ್ಲಿ ಕೆಳಗೆಯಾದರೂ ಮಹಿಳಾ ನಾಯಕಿಯರ ಭಾವಚಿತ್ರ ಹಾಕಬೇಕು ಎಂದು ಆಗ್ರಹಿಸಿದರು.

ಪಕ್ಷದ ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷ ಬಿ.ಜೆ.ವಿಜಯಕುಮಾರ್ ಮಾತನಾಡಿ, 15 ಲಕ್ಷ ಸದಸ್ಯರನ್ನು ನೋಂದಣಿ ಮಾಡಿಸುವ ಗುರಿ ಹೊಂದಲಾಗಿದೆ.ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ, , ನಗರ ಘಟಕದ ಅಧ್ಯಕ್ಷ ಆರ್.ಮೂರ್ತಿ, ಶಾಸಕ ಅನಿಲ್ ಚಿಕ್ಕಮಾದು, ಮುಖಂಡರಾದ ಎಂ.ಕೆ.ಸೋಮಶೇಖರ್, ಶಿವಣ್ಣ , ಕಳಲೆ ಕೇಶವಮೂರ್ತಿ ಇದ್ದರು‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT