ಸೋಮವಾರ, ಜೂನ್ 14, 2021
22 °C

ಸರಗೂರು: ಸಾವಿನಲ್ಲೂ ಒಂದಾದ ದಂಪತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸರಗೂರು: ಮೂಲತಃ ತಾಲ್ಲೂಕಿನ ಹಲಸೂರು ಗ್ರಾಮದ ಸೋಮಾಚಾರ್ ಉರ್ಫ್ ಅಣ್ಣಯ್ಯಸ್ವಾಮಿ ಮತ್ತು ಪತ್ನಿ ಚೂಡಾಮಣಿ ಇಬ್ಬರು ಮೈಸೂರಿನ ಮಂಚೇಗೌಡನಕೊಪ್ಪಲಿನಲ್ಲಿ ನಿಧನರಾಗಿದ್ದು, ಸಾವಿನಲ್ಲೂ ಒಂದಾಗಿದ್ದಾರೆ.

ಇವರು ಮಂಚೇಗೌಡನಕೊಪ್ಪಲಿನಲ್ಲಿ ವಾಸವಾಗಿದ್ದರು. ಬುಧವಾರ ಸಂಜೆ 4 ಗಂಟೆ ಸುಮಾರಿಗೆ ಚೂಡಾಮಣಿ (60) ಅವರಿಗೆ ಎದೆನೋವು ಕಾಣಿಸಿಕೊಂಡು ಅವರು ಮನೆಯಲ್ಲಿ ನಿಧನರಾದರು. ಪತ್ನಿ ಮೃತಪಟ್ಟ ಸ್ವಲ್ಪ ಸಮಯದಲ್ಲಿ ಗಂಡ ಸೋಮಾಚಾರ್ (70) ಅವರಿಗೂ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಮೈಸೂರಿನ ಜಯದೇವ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಗುರುವಾರ ಬೆಳಗಿನ ಜಾವ 4 ಗಂಟೆ ಸಮಯದಲ್ಲಿ ಅವರು ಕೊನೆಯುಸಿರೆಳೆದರು.

ಸಾವನ್ನಪ್ಪಿದ ದಂಪತಿಯ ಶವಗಳನ್ನು ಆಂಬುಲೆನ್ಸ್ ಮೂಲಕ ಸರಗೂರು ತಾಲ್ಲೂಕಿನ ಹಲಸೂರು ಗ್ರಾಮಕ್ಕೆ ಗುರುವಾರ ತಂದು ಅಂತ್ಯಕ್ರಿಯೆ ಮಾಡಲಾಯಿತು.

ಅವರಿಗೆ ಇಬ್ಬರು ಪುತ್ರ, ಪುತ್ರಿ ಇದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು