ಕ್ರಿಕೆಟ್ ಬೆಟ್ಟಿಂಗ್; 9 ಮಂದಿ ಬಂಧನ

ಬುಧವಾರ, ಏಪ್ರಿಲ್ 24, 2019
30 °C
ವಿಜಯನಗರ ಠಾಣಾ ಪೊಲೀಸರ ಕಾರ್ಯಾಚರಣೆ

ಕ್ರಿಕೆಟ್ ಬೆಟ್ಟಿಂಗ್; 9 ಮಂದಿ ಬಂಧನ

Published:
Updated:

ಮೈಸೂರು: ನಗರದ ಹೂಟಗಳ್ಳಿಯ ಮನೆಯೊಂದರ ಮೇಲೆ ಬುಧವಾರ ರಾತ್ರಿ ದಾಳಿ ನಡೆಸಿದ ವಿಜಯನಗರ ಠಾಣೆ ಪೊಲೀಸರು ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿದ್ದ 9 ಮಂದಿಯನ್ನು ಬಂಧಿಸಿದ್ದಾರೆ. ಇವರಿಂದ ₹ 4,800 ಹಣ, ಒಂದು ಟಿ.ವಿ ಹಾಗೂ 4 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ನಗರದ ನಿವಾಸಿಗಳಾದ ಮಂಜುನಾಥ್, ಶೇಖರ್, ವಿಶ್ವಾಸ, ನಕುಲ್, ವಿಲಾಸ್, ನಾಗರಾಜು, ಸೋಮೇಶ್, ಗುರು ಬಂಧಿತರು. ಬಂಧಿತರೆಲ್ಲರೂ 20ರಿಂದ 23ರ ವಯೋಮಾನದವರಾಗಿದ್ದಾರೆ. ಇವರಲ್ಲಿ ಕೆಲವರು ಕಾರ್ಖಾನೆಯ ಕಾರ್ಮಿಕರು ಹಾಗೂ ಮತ್ತೆ ಕೆಲವರು ಆಟೊ ಚಾಲಕರು ಇದ್ದಾರೆ.

ಮನೆಯೊಂದರಲ್ಲಿ ಹುಡುಗರೆಲ್ಲ ಸೇರಿಕೊಂಡು ಮದ್ಯಪಾನ ಮಾಡುತ್ತಾ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತು. ಐಪಿಎಲ್‌ ಪಂದ್ಯ ನಡೆಯುತ್ತಿದ್ದ ಸಮಯಕ್ಕೆ ಸರಿಯಾಗಿ ಮನೆಯ ಮೇಲೆ ಪೊಲೀಸರು ದಾಳಿ ಮಾಡಿದಾಗ ಮೊಬೈಲ್‌ನಲ್ಲಿ ಬೆಟ್ಟಿಂಗ್‌ ಆಡುತ್ತಿದ್ದುದ್ದು ಕಂಡು ಬಂತು ಎಂದು ಪೊಲೀಸರು ತಿಳಿಸಿದ್ದಾರೆ.

ಇನ್‌ಸ್ಪೆಕ್ಟರ್ ಕುಮಾರ್, ಸಿಬ್ಬಂದಿಯಾದ ಶಂಕರ್, ಆರಾಧ್ಯ, ಈಶ್ವರ್, ಶ್ರೀನಿವಾಸ್ ಹಾಗೂ ಇತರರು  ಕಾರ್ಯಾಚರಣೆ ತಂಡದಲ್ಲಿದ್ದರು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !