ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಕಳವಾದ ₹ 1.62 ಕೋಟಿ ಮೌಲ್ಯದ ವಸ್ತುಗಳು ವಾರಸುದಾರರಿಗೆ ಹಸ್ತಾಂತರ

Last Updated 23 ನವೆಂಬರ್ 2021, 7:08 IST
ಅಕ್ಷರ ಗಾತ್ರ

ಮೈಸೂರು: ಜಿಲ್ಲಾ ಪೊಲೀಸರು 72 ಪ್ರಕರಣಗಳಲ್ಲಿ ₹ 1.62 ಕೋಟಿ ಮೌಲ್ಯದ ವಸ್ತುಗಳನ್ನು ದಕ್ಷಿಣ ವಲಯ ಐಜಿಪಿ ಪ್ತವೀಣ್ ಮಧುಕರ್ ಪವಾರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ವಾರಸುದಾರರಿಗೆ ಮಂಗಳವಾರ ಹಸ್ತಾಂತರಿಸಿದರು.

ಈ ಪ್ರಕರಣಗಳನ್ನು ಪತ್ತೆ ಹಚ್ಚಿದ 85 ಮಂದಿಗೆ ಪ್ರಶಂಸನಾ ಪತ್ರ ವಿತರಿಸಿದರು.

ಪ್ರಸಕ್ತ ವರ್ಷ ಜನವರಿಯಿಂದ ಇಲ್ಲಿಯವರೆಗೆ ಜಿಲ್ಲಾ ವ್ಯಾಪ್ತಿಯಲ್ಲಿ 43 ಕೊಲೆಗಳು ಆಗಿದ್ದು, 24 ಪ್ರಕರಣಗಳಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. 24 ಸರಗಳ್ಳತನಗಳಲ್ಲಿ 13, ದರೋಡೆಯ‌ 9 ಪ್ರಕರಣಗಳಲ್ಲಿ 7 56 ವಾಹನ ಕಳ್ಳತನಗಳು ಹಾಗೂ 31 ಮನೆ ಕಳ್ಳತನಗಳನ್ನು ಪತ್ತೆ ಮಾಡಲಾಗಿದೆ ಎಂದು ಎಸ್.ಪಿ.ಚೇತನ್ ಮಾಹಿತಿ ನೀಡಿದರು.

ಈ ಪೈಕಿ ಹುಣಸೂರಿನ ದರೋಡೆ ಪ್ರಕರಣದಲ್ಲಿ 34 ಲಕ್ಷವನ್ನು ವಶಪಡಿಸಿಕೊಳ್ಳಲಾಗಿದೆ.

ಕೆ.ಆರ್.ನಗರದ ಚಂದಗಾಲು ಗ್ರಾಮದ ಶ್ರೀ ರಾಮದೇಗುಲ ಹಾಗೂ ಸಾರ್ವಜನಿಕ ಗ್ರಂಥಾಲಯದಲ್ಲಿ ಹಾಕಲಾಗಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ವಿಷ್ಣುವಿನ ದಶಾವತಾರಗಳ ಕಲಾಕೃತಿಗಳನ್ನು ಪತ್ತೆ ಹಚ್ಚಿರುವುದು ವಿಶೇಷ. ಈ ಕಲಾಕೃತಿಗಳನ್ನು ಕಳವು ಮಾಡಿದ ಇಬ್ಬರು ಆರೋಪಿಗಳು ಆನ್‌ಲೈನ್‌ನಲ್ಲಿ ಹರಾಜಿಗಿಟ್ಟಿದ್ದರು. ₹ 4.50 ಲಕ್ಷದವರೆಗೂ ಹರಾಜು ಕೂಗಲಾಗಿತ್ತು ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT