ಅಂಗನವಾಡಿಯಲ್ಲಿ ಮೂತ್ರ ವಿಸರ್ಜನೆ ಮಾಡಿದ ಮಗುವಿಗೆ ಬರೆ

7

ಅಂಗನವಾಡಿಯಲ್ಲಿ ಮೂತ್ರ ವಿಸರ್ಜನೆ ಮಾಡಿದ ಮಗುವಿಗೆ ಬರೆ

Published:
Updated:
Deccan Herald

ಮೈಸೂರು: ಸಮೀಪದ ದೇವಯ್ಯನಹುಂಡಿ ಮುಖ್ಯರಸ್ತೆಯಲ್ಲಿರುವ ಅಂಗನವಾಡಿಯಲ್ಲಿ ಮೂತ್ರ ವಿಸರ್ಜನೆ ಮಾಡಿಕೊಂಡ 3 ವರ್ಷದ ಮಗುವಿನ ಕಾಲಿಗೆ ಅಂಗನವಾಡಿ ಸಹಾಯಕಿ ನೀಲಮ್ಮ ಬರೆ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಕುರಿತು ಬುಧವಾರ ಗ್ರಾಮಸ್ಥರು ಅಂಗನವಾಡಿ ಮುಂದೆ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ತಿಳಿದು ಸ್ಥಳಕ್ಕೆ ಬಂದ ಕುವೆಂಪುನಗರ ಠಾಣೆ ಪೊಲೀಸರು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಕೆ.ರಾಧಾ ವಿಚಾರಣೆ ನಡೆಸಿದರು.

ಮಗು ಸ್ಪಷ್ಟವಾಗಿ ಬರೆ ಹಾಕಿದ್ದು ನೀಲಮ್ಮ ಎಂದು ಹೇಳಿತು. ಸ್ಥಳದಲ್ಲೇ ಅವರನ್ನು ಸೇವೆಯಿಂದ ವಜಾಗೊಳಿಸಲು ರಾಧಾ ಆದೇಶಿಸಿ, ಪ್ರಕರಣ ದಾಖಲಿಸಲು ಸೂಚನೆ ನೀಡಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !