ಕರಕುಶಲ ವಸ್ತುಗಳ ಆಗರ ಮಹಿಳಾ ದಸರಾ

7
ಜೆ.ಕೆ.ಮೈದಾನದಲ್ಲಿ ಅಲಂಕಾರಿಕ ದೀಪಗಳು, ಆಭರಣಗಳು, ಗೊಂಬೆಗಳುಳ್ಳ ಮಳಿಗೆಗಳು

ಕರಕುಶಲ ವಸ್ತುಗಳ ಆಗರ ಮಹಿಳಾ ದಸರಾ

Published:
Updated:
Deccan Herald

ಮೈಸೂರು: ಇಲ್ಲಿನ ಜೆ.ಕೆ.ಮೈದಾನದಲ್ಲಿ ಗುರುವಾರ ಆರಂಭವಾದ ಮಹಿಳಾ ದಸರೆಯ ತುಂಬೆಲ್ಲ ಕರಕುಶಲ ವಸ್ತು ಗಳೇ ತುಂಬಿದ್ದವು. ಅದೂ ಮಹಿಳೆ ಯರೇ ತಯಾರಿಸಿದ್ದು ಎಂಬುದು ವಿಶೇಷವಾಗಿತ್ತು.

‘ಮಹಿಳೆಯರಿಂದ, ಮಹಿಳೆ ಯರಿಗಾಗಿ, ಮಹಿಳೆಯರಿಗೋಸ್ಕರ’ ಎಂದು ಹೇಳುವಷ್ಟರಮಟ್ಟಿಗೆ ಇಲ್ಲಿನ ಮಳಿಗೆಗಳು ಸ್ತ್ರೀಯರನ್ನು ಕೈಬೀಸಿ ಕರೆದವು. ಇಲ್ಲಿನ ಹಲವು ಮಳಿಗೆಗಳಲ್ಲಿ ಸ್ತ್ರೀಶಕ್ತಿ ಸಂಘಟನೆಗಳು ತಯಾರಿಸಿದ ಬಗೆಬಗೆ ವಸ್ತುಗಳು ಇಲ್ಲಿದ್ದವು.

ಮಂಡ್ಯದಿಂದ ಬಂದಿದ್ದ ಲಕ್ಷ್ಮಿದೇವಿ ಸ್ತ್ರೀ ಶಕ್ತಿ ಮಹಿಳಾ ಗುಂಪಿನ ಸದಸ್ಯರು ಜೇಡಿಮಣ್ಣಿನಿಂದ ಮಾಡಿದ ಆನೆ, ಗಣಪತಿ, ವಿಧವಿಧ ಬಗೆಯ ಲ್ಯಾಂಪ್‌ಗಳನ್ನು ಮಾರಾಟಕ್ಕೆ ತಂದಿರಿಸಿದ್ದರು. ಇಷ್ಟೆಲ್ಲವನ್ನು ಕೇವಲ 3 ಮಂದಿ ಮಹಿಳೆಯರು ಮಾಡಿದ್ದು, ವಿಶೇಷವಾಗಿತ್ತು.

ಪೂ ಜೈನ್ ಫ್ಯಾಷನ್ ಕ್ರಿಯೇಷನ್ಸ್ ವತಿಯಿಂದ ತಾಯಿ ಮತ್ತು ಮಗಳು ಇಬ್ಬರೂ ಜತೆಗೂಡಿ ಮಾಡಿದ ಫ್ಯಾಷನ್ ವಸ್ತುಗಳು ಅಲ್ಲಿದ್ದವು. ತಾಯಿ ಸರಸ್ವತಿ ಮತ್ತು ಪುತ್ರಿ ಪೂಜಾ ತಮ್ಮ ಬಿಡುವಿನ ವೇಳೆಯಲ್ಲಿ ತಯಾರಿಸಿದ ಕಿವಿಯೋಲೆಗಳು, ರಿಂಗ್‌ಗಳು ಯುವತಿಯ ಮನಸೆಳೆದವು.

ಹಾಸನ ಜಿಲ್ಲೆ ಬೇಲೂರಿನ ಸೌಮ್ಯ ನಾಯಕಿ ಮತ್ತು ರಂಗನಾಯಕಿ ಎಂಬ ಮಹಿಳಾ ಶಿಲ್ಪಿಗಳು ತಯಾರಿಸಿದ ಕೆತ್ತನೆಯ ಕೆಲಸಗಳು ಮನಸೂರೆಗೊಳ್ಳುವಂತಿದ್ದವು. ಕಲ್ಲಿನ ಕುಟ್ಟಣಿಗೆ, ಪಡ್ಡಿನ ಬಟ್ಟಲು, ವಿಗ್ರಹಗಳು ಮಾರಾಟಕ್ಕೆ ಅಣಿಯಾಗಿದ್ದವು.

ಚನ್ನಪಟ್ಟಣ ತಾಲ್ಲೂಕಿನ ಮುನಿಯ ಪ್ಪನದೊಡ್ಡಿಯಿಂದ ಬಂದಿದ್ದ ಬೀರೇಶ್ವರ ಸ್ತ್ರೀ ಶಕ್ತಿ ಸ್ವಸಹಾಯ ಸಂಘದವರು ಮರದ ಕೆತ್ತನೆಯ ವಸ್ತುಗಳನ್ನು ಮಾರಾ ಟಕ್ಕೆ ತೆಗೆದುಕೊಂಡು ಬಂದಿದ್ದರು. ಮರದ ಆಟಿಕೆಗಳು, ಷೋಕೇಶ್‌ನಲ್ಲಿ ಇಡುವಂತಹ ಅಲಂಕಾರಿಕ ವಸ್ತುಗಳು, ಗೊಂಬೆಗಳು ಇಲ್ಲಿದ್ದವು. ಈ ವೇಳೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕರಕುಶಲಕರ್ಮಿ ಜಯಲಕ್ಷ್ಮಮ್ಮ, ‘ಕಳೆದ ವರ್ಷ ವ್ಯಾಪಾರ ಸಾಧಾರಣ ವಾಗಿತ್ತು. ಈ ಬಾರಿ ನೋಡಬೇಕು’ ಎಂದು ಅವರು ಹೇಳಿದರು.‌

ಪ್ರಕೃತಿ ಎಂಟರ್‌ಪ್ರೈಸಸ್‌ನ ಅಲಂಕಾರಿಕ ದೀಪಗಳು, ಹತ್ತಿಯ ಬ್ಯಾಗ್‌ಗಳು, ಗಾರ್ಮೆಂಟ್ಸ್ ಉತ್ಪನ್ನಗಳು ಆಕರ್ಷಣೀ ಯವಾಗಿದ್ದವು. ಮೈಸೂರಿನ ಅಂಜಲಿ ಅವರು ಟೆರಾಕೋಟ್‌ನ,
ಸಿಲ್ಕ್‌ ಥ್ರೆಡ್ ಆಭರಣ, ಆ್ಯಂಟಿಕ್ ಜುಯೆಲ್ಲರಿಗಳನ್ನು ಪ್ರದರ್ಶನ ಹಾಗೂ ಮಾರಾಟಕ್ಕೆ ಇಟ್ಟಿದ್ದರು.

ತಿ.ನರಸೀಪುರದ ಜಮೀಲಾಬಾನು ಅವರು ಕುಂದನ್‌ ವರ್ಕ್‌ ಇರುವ ಅಲಂಕಾರಿಕ ವಸ್ತುಗಳನ್ನು ತಂದಿದ್ದರು. ಸೋಲೊವುಡ್‌ ಗಿಡಗಳ ರೆಂಬೆಗಳಿಂದ ಮಾಡಿದ ಅಲಂಕಾರಿಕ ವಸ್ತುಗಳು, ಮುಸುಕಿನ ಜೋಳದ ಎಲೆಯಿಂದ ಮಾಡಿದ ಹೂಗಳು, ಒಣಹುಲ್ಲಿನ ಗೂಡುಗಳು ಮನಸೆಳೆಯುವಂತಿದ್ದವು.

ಇವುಗಳ ಜತೆಗೆ, ಮಕ್ಕಳ ಆಟಿಕೆಗಳು, ಸಾವಯವ ಆಹಾರಧಾನ್ಯಗಳು, ಔಷಧೀಯ ವಸ್ತುಗಳು, ವಿವಿಧ ಬಗೆಯ ಮಹಿಳೆಯರ ಉಡುಪುಗಳು, ಕಿವಿಯೋಲೆಗಳು, ಕೈಚೀಲಗಳು ಸೇರಿದಂತೆ ಮಹಿಳೆಯರಿಗೆ ಬೇಕಾದ ಅನೇಕ ವಸ್ತುಗಳು ಇಲ್ಲಿವೆ.

ಮುಂದಿನ ವರ್ಷದಿಂದ ಮಹಿಳೆಯರ ಆಹಾರಮೇಳ

ಮಹಿಳಾ ದಸರಾ ಉದ್ಘಾಟಿಸಿ ಮಾತನಾಡಿದ ಸಚಿವೆ ಜಯಮಾಲಾ, ‘ಮುಂದಿನ ವರ್ಷದಿಂದ ಸ್ತ್ರೀಶಕ್ತಿ ಸಂಘಗಳ ಸದಸ್ಯರಿಂದ ಆಹಾರಮೇಳ ನಡೆಸಲು ಉದ್ದೇಶಿಸಲಾಗಿದೆ’ ಎಂದು ತಿಳಿಸಿದರು.

ಈ ವರ್ಷವೇ ರಾಜ್ಯದ ಎಲ್ಲ ಸ್ತ್ರೀಶಕ್ತಿ ಸಂಘಗಳ ಜತೆ ಸಭೆ ನಡೆಸಿ ಮಹಿಳೆಯರ ಆಹಾರ ಮೇಳ ನಡೆಸಲು ಚರ್ಚಿಸಿದ್ದೆ. ಆದರೆ, ಸಮಯ ಕಡಿಮೆ ಇರುವುದರಿಂದ ಈ ಬಾರಿ ಕಷ್ಟ ಎನ್ನುವ ಅಭಿಪ್ರಾಯ ವ್ಯಕ್ತವಾಯಿತು. ಹಾಗಾಗಿ, ಮುಂದಿನ ವರ್ಷದ ದಸರೆಯಲ್ಲಿ ಮಹಿಳೆಯ ಆಹಾರ ಮೇಳ ನಡೆಸಲಾಗುವುದು’ ಎಂದರು.

ಮಹಿಳಾ ಉದ್ಯಮಿಗಳು, ಸ್ವಸಹಾಯ ಗುಂಪಿನವರು ಸರ್ಕಾರದ ಯೋಜನೆಗಳ ಲಾಭ ಪಡೆಯಬೇಕು. ಕೌಶಲ ತರಬೇತಿ ಪಡೆದು ಉತ್ಪಾದನೆ ಹೆಚ್ಚಿಸಿಕೊಂಡು, ಮಾರುಕಟ್ಟೆ ಕಂಡುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

* ಅಂಗನವಾಡಿ ಕಾರ್ಯಕರ್ತೆಯರು ಪ್ರಶಸ್ತಿಗಳನ್ನು ಮೀರಿ ಬೆಳೆದವರು. ನಿಜವಾದ ಸಮಾಜಸೇವಕಿಯರು ಅವರೇ ಆಗಿದ್ದಾರೆ

-ಜಯಮಾಲಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !