ಭಾನುವಾರ, ಅಕ್ಟೋಬರ್ 20, 2019
27 °C

ಪಂಜಕುಸ್ತಿ: ಶಾರದಾ ‘ದಸರಾ ಕುಮಾರಿ’

Published:
Updated:
Prajavani

ಮೈಸೂರು: ತೋಳ್ಬಲದ ಪ್ರದರ್ಶನ ನೀಡಿದ ಮೈಸೂರಿನ ಶಾರದಾ ಕುಮಾರಿ ಅವರು ದಸರಾ ಪಂಜಕುಸ್ತಿಯಲ್ಲಿ ‘ದಸರಾ ಕುಮಾರಿ’ ಗೌರವ ತಮ್ಮದಾಗಿಸಿಕೊಂಡರು.

ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಸ್ಪರ್ಧೆಯ ಮಹಿಳೆಯರ 75 ಕೆ.ಜಿ.ವಿಭಾಗದಲ್ಲಿ ಅವರು ಅಗ್ರಸ್ಥಾನ ಗಳಿಸಿದರು.

ಮಂಗಳೂರಿನ ನಮ್ರತಾ ಗಾಣಿಗ (70 ಕೆ.ಜಿ.ವಿಭಾಗ), ಹಾಸನದ ಮಧುರಾ (65 ಕೆ.ಜಿ), ಶ್ವೇತಾ (60 ಕೆ.ಜಿ), ಬೆಂಗಳೂರಿನ ಯಶಸ್ವಿನಿ (55 ಕೆ.ಜಿ), ದಾವಣಗೆರೆಯ ಖಮರ್‌ ತಾಜು (50 ಕೆ.ಜಿ), ಹಾಸನದ ಭಾನುಪ್ರಿಯಾ (45 ಕೆ.ಜಿ.) ಅವರು ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದುಕೊಂಡರು.

ಬೆಂಗಳೂರಿನ ಸಂದೇಶ್‌ ಅವರು ‘ದಸರಾ ವಿಶೇಷಚೇತನ’ ಮತ್ತು ಮೈಸೂರಿನ ಬಿ.ಗೀತಾ ಅವರು ‘ದಸರಾ ನವಚೇತನ ತಾರೆ’ ಗೌರವ ಪಡೆದುಕೊಂಡರು.

Post Comments (+)