ಇಂದಿನಿಂದ ‘ಗೋಲ್ಡ್‌ ಕಾರ್ಡ್‌’ ಲಭ್ಯ

7

ಇಂದಿನಿಂದ ‘ಗೋಲ್ಡ್‌ ಕಾರ್ಡ್‌’ ಲಭ್ಯ

Published:
Updated:

ಮೈಸೂರು: ‘ದಸರಾ ಗೋಲ್ಡ್‌ ಕಾರ್ಡ್‌’ ಅಕ್ಟೋಬರ್‌ 2 ರಿಂದ ಆನ್‌ಲೈನ್‌ನಲ್ಲಿ ಮಾರಾಟಕ್ಕೆ ಲಭ್ಯವಾಗಲಿದೆ. ಒಟ್ಟು 1,000 ಕಾರ್ಡ್‌ಗಳು ಲಭ್ಯವಿವೆ ಎಂದು ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್ ಸೋಮವಾರ ತಿಳಿಸಿದರು.

ಪ್ರತಿ ಕಾರ್ಡಿಗೆ ₹ 3,999 ದರ ನಿಗದಿಪಡಿಸಲಾಗಿದೆ. ಕಳೆದ ವರ್ಷವೂ ಇದೇ ದರದಲ್ಲಿ ಗೋಲ್ಡ್‌ ಕಾರ್ಡ್‌ ಮಾರಾಟ ನಡೆದಿತ್ತು. ಈ ಕಾರ್ಡ್‌ ಹೊಂದಿರುವವರಿಗೆ ದಸರಾದ ಎಲ್ಲ ಕಾರ್ಯಕ್ರಮಗಳಿಗೆ ಪ್ರವೇಶ ಲಭಿಸಲಿದೆ. ಜಂಬೂ ಸವಾರಿ ಮತ್ತು ಪಂಜಿನ ಕವಾಯತು ಕಾರ್ಯಕ್ರಮದಲ್ಲಿ ವಿಶೇಷ ಆಸನದ ವ್ಯವಸ್ಥೆಯಿರಲಿದೆ.

ಗೋಲ್ಡ್‌ ಕಾರ್ಡ್‌ ಬಗ್ಗೆ ಹೆಚ್ಚಿನ ಮಾಹಿತಿಗೆ ದಸರಾ ಅಧಿಕೃತ ವೆಬ್‌ಸೈಟ್‌ www.mysoredasara.gov.in ಅಥವಾ ಮೊ: 8217395364 ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !