ದಸರಾ ಮಹೋತ್ಸವ; ವಾಹನ ನಿಲುಗಡೆ ವಿವರ

7

ದಸರಾ ಮಹೋತ್ಸವ; ವಾಹನ ನಿಲುಗಡೆ ವಿವರ

Published:
Updated:

ಮೈಸೂರು: ದಸರಾ ಮಹೋತ್ಸವದ ಅಂಗವಾಗಿ ನಗರದ ವಿವಿಧೆಡೆ ನಡೆಯುವ ಕಾರ್ಯಕ್ರಮಗಳಲ್ಲಿ ನಿಗದಿಪಡಿಸಿದ ಸ್ಥಳಗಳಲ್ಲೇ ವಾಹನಗಳನ್ನು ನಿಲುಗಡೆ ಮಾಡಬೇಕು ಎಂದು ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರರಾವ್ ಸೂಚಿಸಿದ್ದಾರೆ.

ದಸರಾ ವಸ್ತುಪ್ರದರ್ಶನದಲ್ಲಿ ಅ.10ರಿಂದ 19ರವರಗೆ ವಸ್ತು ಪ್ರದರ್ಶನದ ಪೂರ್ವದ್ವಾರದ ಒಳ ಆವರಣ (ಇಟ್ಟಿಗೆಗೂಡು) ದಕ್ಷಿಣ ದ್ವಾರದ ಒಳ ಆವರಣ (ಎಂ.ಜಿ.ರಸ್ತೆ) ಹಾಗೂ ಫುಟ್‍ಬಾಲ್ ಮೈದಾನದಲ್ಲಿ ಎಲ್ಲಾ ಮಾದರಿಯ ವಾಹನಗಳನ್ನು ನಿಲುಗಡೆ ಮಾಡಬಹುದು.

ಕುಸ್ತಿ ಪ್ರದರ್ಶನದಲ್ಲಿ ಅ.10ರಿಂದ 15ರವರೆಗೆ ವಸ್ತುಪ್ರದರ್ಶನದ ಪೂರ್ವದ್ವಾರದ ಒಳ ಆವರಣ (ಇಟ್ಟಿಗೆಗೂಡಿನ) ಹಾಗೂ ಫುಟ್‍ಬಾಲ್ ಮೈದಾನದಲ್ಲಿ ಎಲ್ಲಾ ಮಾದರಿಯ ವಾಹನಗಳನ್ನು ನಿಲುಗಡೆ ಮಾಡಬಹುದು. ಆಹಾರ ಮೇಳ ನಡೆಯುವ ಹೋಟಲ್ ಲಲಿತ್ ಮಹಲ್ ಪಕ್ಕದ ಮೈದಾನದಲ್ಲಿ ಅ.10ರಿಂದ 17ರವರೆಗೆ ಲಲಿತ್ ಮಹಲ್ ಮೈದಾನ ಹಾಗೂ ಲಲಿತ್ ಮಹಲ್ ಸರ್ವಿಸ್ ರಸ್ತೆಯಲ್ಲಿ ಎಲ್ಲ ವಿಧದ ಸಾರ್ವಜನಿಕರ ವಾಹನಗಳನ್ನು ನಿಲುಗಡೆ ಮಾಡಬಹುದು.

ಅ. 13ರಂದು ನಡೆಯುವ ಓಪನ್ ಸ್ಟ್ರೀಟ್ ಫೆಸ್ಟೀವಲ್‌ನಲ್ಲಿ ಶತಮಾನೋತ್ಸವ ಭವನ, ಮಹಾರಾಜ ಮತ್ತು ಯುವರಾಜ ಕಾಲೇಜು ಮೈದಾನದ ಆವರಣದಲ್ಲಿ ಹಾಗೂ ಮಹಾರಾಜ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಸಾರ್ವಜನಿಕರ ಲಘು ವಾಹನಗಳು (ಎಲ್.ಎಂ.ವಿ) ವಾಹನ ನಿಲುಗಡೆ ಮಾಡಬಹುದಾಗಿದೆ.

ಜಯಚಾಮರಾಜೇಂದ್ರ ಮೃಗಾಲಯದ ಬಳಿ ಅ. 10ರಿಂದ 19ರವರೆಗೆ ಮೃಗಾಲಯದ ಎದುರಿನಲ್ಲಿರುವ ವಾಹನ ನಿಲುಗಡೆ ಸ್ಥಳ, ವಸ್ತು ಪ್ರದರ್ಶನದ ಪೂರ್ವದ್ವಾರದ ಒಳ ಆವರಣ, ವಸ್ತುಪ್ರದರ್ಶನದ ದಕ್ಷಿಣ ದ್ವಾರದ ಒಳ ಆವರಣ ಹಾಗೂ ಫುಟ್‍ಬಾಲ್ ಮೈದಾನದಲ್ಲಿ ಎಲ್ಲಾ ಮಾದರಿಯ ವಾಹನಗಳನ್ನು ನಿಲುಗಡೆ ಮಾಡಬಹುದು.

ದಸರಾ ಕ್ರೀಡೆಗಳು ನಡೆಯುವ ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ಅ. 10ರಿಂದ 17ರವರೆಗೆ ಚಾಮುಂಡಿ ವಿಹಾರ ಕ್ರೀಡಾಂಗಣದ ಪಶ್ಚಿಮ ಭಾಗದ ಪಾರ್ಕಿಂಗ್‌ನಲ್ಲಿ ಎಲ್ಲಾ ಮಾದರಿಯ ವಾಹನಗಳು ಹಾಗೂ ಚಾಮುಂಡಿ ವಿಹಾರ ಕ್ರೀಡಾಂಗಣದ ದಕ್ಷಿಣ ಭಾಗದ ಬ್ಯಾಸ್ಕೆಟ್ ಬಾಲ್ ಕೋರ್ಟ್‌ ಬಳಿಯ ಪಾರ್ಕಿಂಗ್‌ ಸ್ಥಳದಲ್ಲಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸಬಹುದು.

ಅ. 18ರಿಂದ 19ರವರೆಗೆ ಬನ್ನಿಮಂಟಪ ಕವಾಯತು ಮೈದಾನದಲ್ಲಿ ಪಂಜಿನ ಕವಾಯತಿನಲ್ಲಿ ಪಾಲ್ಗೊಳ್ಳುವ ಸಾರ್ವಜನಿಕರು ಬನ್ನಿಮಂಟಪದ ಕವಾಯತು ಮೈದಾನದ ದಕ್ಷಿಣ ಭಾಗದಲ್ಲಿರುವ ಆವರಣದಲ್ಲಿ ಪಾಸ್ ಹೊಂದಿರುವ ಸಾರ್ವಜನಿಕರ ಲಘು ವಾಹನಗಳು (ಎಲ್.ಎಂ.ವಿ) ಸೆಂಟ್ ಫಿಲೋಮಿನಾಸ್ ಕಾಲೇಜು ಆವರಣದಲ್ಲಿರುವ ಫುಟ್‍ಬಾಲ್ ಮೈದಾನದಲ್ಲಿ ಸಾರ್ವಜನಿಕರ ಲಘು ವಾಹನಗಳು (ಎಲ್.ಎಂ.ವಿ) ಮತ್ತು ದ್ವಿಚಕ್ರ ವಾಹನಗಳು, ಸೆಂಟ್ ಫಿಲೋಮಿನಾಸ್ ಕಾಲೇಜಿನ ಆವರಣದಲ್ಲಿ ಸಾರ್ವಜನಿಕರ ದ್ವಿಚಕ್ರ ವಾಹನಗಳು ಹಾಗೂ ಸೆಂಟ್ ಮಥಾಯಿಸ್ ಶಾಲಾ ಆವರಣದಲ್ಲಿ ಸಾರ್ವಜನಿಕರ ದ್ವಿಚಕ್ರ ವಾಹನಗಳನ್ನು ನಿಲುಗಡೆ ಮಾಡಬಹುದು.

ಚಾಮುಂಡಿಬೆಟ್ಟ
ಅ. 10ರಿಂದ 19ರವರಗೆ

1 ನೇ ಪಾರ್ಕಿಂಗ್     ದ್ವಿಚಕ್ರ ವಾಹನಗಳು
2 ನೇ ಪಾರ್ಕಿಂಗ್     ಲಘು ವಾಹನಗಳು (ಎಲ್.ಎಂ.ವಿ)
3ನೇ ಪಾರ್ಕಿಂಗ್      ಲಘು ವಾಹನಗಳು (ಎಲ್.ಎಂ.ವಿ)
ದೇವಿಕೆರೆ ಮೈದಾನ   ಭಾರಿ ವಾಹನಗಳು, ಟೆಂಪೊ ಟ್ರಾವಲರ್

ಸಾಂಸ್ಕೃತಿಕ ಕಾರ್ಯಕ್ರಮಗಳು: ಅರಮನೆ
ಅ. 10ರಿಂದ 18ರವರಗೆ
ಕರಿಕಲ್ ತೊಟ್ಟಿ ದ್ವಾರದ ಹೊರ ಆವರಣ                         ಸಾರ್ವಜನಿಕರ ಲಘು ವಾಹನಗಳು (ಎಲ್.ಎಂ.ವಿ) ಮತ್ತು ದ್ವಿಚಕ್ರ ವಾಹನ
ಅಂಬಾವಿಲಾಸ ದ್ವಾರದ ಹೊರ ಆವರಣ                          ಸಾರ್ವಜನಿಕರ ಲಘು ವಾಹನಗಳು (ಎಲ್.ಎಂ.ವಿ)
ಕಾಡ ಕಛೇರಿ ಆವರಣ                                           ಸಾರ್ವಜನಿಕರ ಲಘು ವಾಹನಗಳು (ಎಲ್.ಎಂ.ವಿ)
ವರಹಾದ್ವಾರದ ಹೊರ ಆವರಣ                                  ಸಾರ್ವಜನಿಕರ ಲಘು ವಾಹನಗಳು (ಎಲ್.ಎಂ.ವಿ) ಮತ್ತು ದ್ವಿಚಕ್ರ ವಾಹನ
ಜಯಮಾರ್ತಾಂಡ ದ್ವಾರದ ಎದುರಿನ ಫುಟ್‍ಬಾಲ್ ಮೈದಾನ      ಸಾರ್ವಜನಿಕರ ಲಘು ವಾಹನಗಳು (ಎಲ್.ಎಂ.ವಿ) ದ್ವಿಚಕ್ರ ವಾಹನ

ಫಲಪುಷ್ಪ ಪ್ರದರ್ಶನ: ಕುಪ್ಪಣ್ಣ ಪಾರ್ಕ್
ಅ. 10ರಿಂದ 19ರವರಗೆ
ಕುಪ್ಪಣ್ಣ ಪಾರ್ಕಿನ ಉತ್ತರಕ್ಕೆ ಇರುವ ಅರಸು ಬೋರ್ಡಿಂಗ್ ಶಾಲಾ ಆವರಣ        ಸಾರ್ವಜನಿಕರ ದ್ವಿಚಕ್ರ ವಾಹನಗಳು
ಪೊಲೀಸ್ ಆಯುಕ್ತರ ಕಚೇರಿ ಆವರಣ                                            ಸಾರ್ವಜನಿಕರ ವಾಹನಗಳು
ವಸಂತ್ ಮಹಲ್ ಆವರಣ                                                       ಸಾರ್ವಜನಿಕರ ವಾಹನಗಳು
ಪೀಪಲ್ಸ್ ಪಾರ್ಕ್ ಆವರಣ                                                        ಸಾರ್ವಜನಿಕರ ವಾಹನಗಳು

ಆಹಾರ ಮೇಳ:- ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನ
ಅ. 10ರಿಂದ 17ರವರೆಗೆ
ಜ್ಯೂನಿಯರ್ ಮಹಾರಾಜ ಕಾಲೇಜು ಆವರಣ             ಸಾರ್ವಜನಿಕರ ಲಘು ವಾಹನಗಳು (ಎಲ್.ಎಂ.ವಿ) ಮತ್ತು ದ್ವಿಚಕ್ರ ವಾಹನಗಳು
ಜಿಲ್ಲಾಧಿಕಾರಿಗಳ ಕಚೇರಿಯ ಉತ್ತರ ಭಾಗದಲ್ಲಿ            ಸಾರ್ವಜನಿಕರ ದ್ವಿಚಕ್ರ ವಾಹನ
ಮಹಾರಾಣಿ ಕಾಲೇಜು ಅವರಣ                           ಸಾರ್ವಜನಿಕರ ಲಘು ವಾಹನಗಳು (ಎಲ್.ಎಂ.ವಿ) ಮತ್ತು ದ್ವಿಚಕ್ರ ವಾಹನಗಳು
ಬ್ಯಾಸ್ಕೇಟ್ ಬಾಲ್ ಮೈದಾನ (ರಾಧಕೃಷ್ಣ ಮಾರ್ಗ)        ಸಾರ್ವಜನಿಕರ ಲಘು ವಾಹನಗಳು (ಎಲ್.ಎಂ.ವಿ)

ಯುವ ದಸರಾ: ಮಹಾರಾಜ ಕಾಲೇಜು ಮೈದಾನ
ಅ. 10ರಿಂದ 17ರವರೆಗೆ
ಶತಮಾನೋತ್ಸವ ಭವನದ ಆವರಣ                                           ಸಾರ್ವಜನಿಕರ ಲಘು ವಾಹನಗಳು (ಎಲ್.ಎಂ.ವಿ)
ಮಹಾರಾಜ ಮತ್ತು ಯುವರಾಜ ಕಾಲೇಜು ಮೈದಾನದ ಆವರಣ                 ಸಾರ್ವಜನಿಕರ ದ್ವಿಚಕ್ರ ವಾಹನಗಳು
ಜಯಚಾಮರಾಜೇಂದ್ರ ಅರಸು ಬೋರ್ಡಿಂಗ್‌ ಶಾಲೆ ಮೈದಾನ                   ಸಾರ್ವಜನಿಕರ ಲಘು ವಾಹನಗಳು (ಎಲ್.ಎಂ.ವಿ)
ಕೆ.ಅರ್.ಬಿ. ರಸ್ತೆಯಲ್ಲಿ ಏಕಲವ್ಯ ವೃತ್ತದಿಂದ ವಾಣಿವಿಲಾಸ ರಸ್ತೆ ಜಂಕ್ಷನ್‌ವರೆಗೆ    ಸಾರ್ವಜನಿಕರ ದ್ವಿಚಕ್ರ ವಾಹನ

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !