ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಣಂ ಪ್ರಮಾದ ಮರುಕಳಿಸದಿರಲಿ: ಡಾ.ಸುಧಾಕರ್‌

ದಸರೆ ಆಚರಣೆ ತೀರಾ ಸರಳವಾಗಿರಲಿ: ಡಾ.ಸುಧಾಕರ್‌
Last Updated 6 ಅಕ್ಟೋಬರ್ 2020, 2:07 IST
ಅಕ್ಷರ ಗಾತ್ರ

ಮೈಸೂರು: ನಾಡಹಬ್ಬ ಮೈಸೂರು ದಸರಾವನ್ನು ಕೇರಳದ ಓಣಂ ರೀತಿ ಅದ್ಧೂರಿಯಾಗಿಆಚರಣೆ ಮಾಡ ಬಾರದು. ಕೋವಿಡ್‌ ಪ್ರಕರಣ ಹೆಚ್ಚುತ್ತಿ ರುವ ಕಾರಣ ತೀರಾ ಸರಳವಾಗಿರಲಿ ಎಂದು ಸಚಿವ ಡಾ.ಕೆ.ಸುಧಾಕರ್‌ಸಲಹೆ ನೀಡಿದರು.

ಓಣಂ ಆಚರಣೆಗೆ ಮುಕ್ತ ಅವಕಾಶ ನೀಡಿದ ಬಳಿಕ ಕೇರಳದಲ್ಲಿ ಉಂಟಾದ ಸಮಸ್ಯೆ ಇಲ್ಲಿ ಉದ್ಭವಿಸದಂತೆ ಗಮನ ಹರಿಸಲಾಗುವುದು. ಮೊದಲು ಅಲ್ಲಿ ನಿಯಂತ್ರಣದಲ್ಲಿತ್ತು. ಓಣಂ ಬಳಿಕ ಪ್ರತಿದಿನ ಏಳೆಂಟು ಸಾವಿರ ಕೋವಿಡ್‌ ಪ್ರಕರಣಗಳು ಪತ್ತೆಯಾದವು. ಅದೇ ತಪ್ಪು ಮೈಸೂರಲ್ಲಿ ಮರುಕಳಿಸಬಾರದು ಎಂದರು.

ಕೋವಿಡ್‌ ಸ್ಫೋಟಗೊಂಡು ದಸರೆಯಿಂದ ರಾಜ್ಯಕ್ಕೆ ಕೆಟ್ಟ ಹೆಸರು ಬರಬಾರದು. ಈ ಸಂಬಂಧ ಮುಖ್ಯ ಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ. ಹಲವು ಮಾರ್ಪಾಡು ಮಾಡಲು ಶೀಘ್ರದಲ್ಲೇ ಸಭೆ ನಡೆಸಲಾಗುವುದು ಎಂದರು.

10 ಸಾವಿರ ಪರೀಕ್ಷೆ ಗುರಿ: ‌ಜಿಲ್ಲೆಯಲ್ಲಿ ಪ್ರತಿ ದಿನ 10 ಸಾವಿರ ಕೋವಿಡ್‌ ಪರೀಕ್ಷೆ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೆಂಕಟೇಶ್‌ ಹೇಳಿದರು.

ಹೊರಗುತ್ತಿಗೆ ನೌಕರರ ಪ್ರತಿಭಟನೆಯಿಂದಾಗಿ ಕೋವಿಡ್‌ ಪ್ರಕರಣಗಳನ್ನು ದಾಖಲೆ ಮಾಡಲು ಆಗಿರಲಿಲ್ಲ. ಈಗ ಆ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT