ಬುಧವಾರ, ಮಾರ್ಚ್ 3, 2021
25 °C
ದಸರಾ ರಾಜ್ಯಮಟ್ಟದ ಗ್ರೀಕೊ ರೋಮನ್‌ ಕುಸ್ತಿ ಇಂದು

ಆನಂದ್‌–ರೋಹಿತ್‌ ರೋಚಕ ಸೆಣಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ದಾವಣಗೆರೆಯ ಆನಂದ್‌ ಮತ್ತು ದೆಹಲಿಯ ರೋಹಿತ್‌ ದಲಾಲ್‌ ಅವರು ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಮಂಗಳವಾರ ನೆರೆದಿದ್ದ ಕುಸ್ತಿಪ್ರಿಯರನ್ನು ರಂಜಿಸಿದರು.

ದಸರಾ ನಾಡಕುಸ್ತಿ ಅಂಗವಾಗಿ ನಡೆದ ಒಂದು ಗಂಟೆ ನಡೆದ ಹೋರಾಟದಲ್ಲಿ ಇಬ್ಬರೂ ಜಿದ್ದಾಜಿದ್ದಿನ ಪೈಪೋಟಿ ನಡೆಸಿದರು. ಮೇಲಿಂದ ಮೇಲೆ ಬಿಗಿಪಟ್ಟುಗಳನ್ನು ಹಾಕಿದರು. ಆದರೆ ಇಬ್ಬರೂ ಬಿಟ್ಟುಕೊಡಲು ಸಿದ್ಧರಿಲ್ಲದ ಕಾರಣ ಕುಸ್ತಿ ಸಮಬಲದಲ್ಲಿ ಕೊನೆಗೊಂಡಿತು.

ಸಿಂಧುವಳ್ಳಿಯ ರಿಷಾದ್, ಪಾಂಡವಪುರದ ಅಲ್ಲಾಭಕ್ಷ್ ವಿರುದ್ಧ; ವೀರನಗೆರೆಯ ಶಿವಕುಮಾರ್, ಮೆಲ್ಲಹಳ್ಳಿಯ ಮನೋಜ್‌ ವಿರುದ್ಧ; ಕಳಲೆಯ ಸೋಮಣ್ಣ, ಆನಂದ್‌ ವಿರುದ್ಧ; ಮೇಳಾಪುರದ ಚೇತನ್, ಭೂತಪ್ಪನಗರಡಿಯ ರೋಹಿತ್‌ ವಿರುದ್ಧ; ಕಾಳಿಸಿದ್ಧನ ಹುಂಡಿಯ ಕುಮಾರ್, ಗಾಂಧಿನಗರದ ರಕ್ಷಿತ್‌ ವಿರುದ್ಧ; ತಿಲಕ್‌ನಗರದ ವಿಶಾಲ್, ಮಂಡಿಮೊಹಲ್ಲಾದ ಭರತ್‌ ವಿರುದ್ಧ; ಗೋಳೂರಿನ ರಮೇಶ್, ಮೆಲ್ಲಹಳ್ಳಿಯ ಚಂದ್ರಶೇಖರ್‌ ವಿರುದ್ಧವೂ ಗೆಲುವು ಪಡೆದರು.

ಇತರ ಹಣಾಹಣಿಗಳಲ್ಲಿ ಮೈಸೂರಿನ ಭೈರಪ್ಪ ನಾಯಕ, ಗಂಜಾಂನ ದಿಲೀಪ್‌ ವಿರುದ್ಧ; ಹೊಂಗಳ್ಳಿಯ ಎಚ್‌.ಎಂ.ನಿಶ್ಚಿತ್, ಕಳಲೆಯ ಮಹದೇವಸ್ವಾಮಿ ವಿರುದ್ಧ; ಕಾಳಿಸಿದ್ಧನಹುಂಡಿಯ ಎಂ.ಚೇತನ್, ಬೆಳಗೊಳದ ಬಿ.ಆರ್‌.ಸುನಿಲ್, ಭೂತಪ್ಪನಗರಡಿಯ ವಿನಾಯಕ, ಹಳ್ಳದಕೇರಿಯ ಎಂ.ಗಣೇಶ್‌ ವಿರುದ್ಧ; ಕೆಸರೆಯ ಕೌಶಿಕ್, ಬನ್ನೂರಿನ ಚಂದ್ರು ವಿರುದ್ಧ; ನಂಜನಗೂಡಿನ ಎನ್‌.ಮಹೇಶ್, ಪಾಲಹಳ್ಳಿಯ ಎಸ್‌.ಹರ್ಷಿತ್‌ ವಿರುದ್ಧ ಜಯಗಳಿಸಿದರು.

ಸಮಬಲ: ಕೆ.ಜಿ.ಕೊಪ್ಪಲಿನ ಕಿರಣ್‌– ಬಾಬುರಾಯನ ಕೊಪ್ಪಲಿನ ಕಿರಣ್, ವೀರನಗೆರೆಯ ಕೇಶವ– ರಮ್ಮನಹಳ್ಳಿಯ ರಾಜಶೇಖರ್, ಕುಂಬಾರಕೊಪ್ಪಲಿನ ಠಾಕೂರ್– ದಾವಣಗೆರೆಯ ಬಾಬುಜಾನ್, ಗೋಳೂರಿನ ನಾಗರಾಜು– ಮೈಸೂರಿನ ಗಂಗಾಧರ, ರಮ್ಮನಹಳ್ಳಿಯ ಅರುಣ್– ನಂಜನಗೂಡಿನ ಗೌತಮ್, ಅಶೋಕಪುರಂನ ಚಂದ್ರಶೇಖರ್– ಬೆಂಗಳೂರಿನ ಪುಟ್ಟರಾಜು ನಡುವಿನ ಹೋರಾಟ ಸಮಬಲದಲ್ಲಿ ಕೊನೆಗೊಂಡವು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು