ಗುರುತು ಸಿಗದ ನಾಲ್ವರ ಶವ ಪತ್ತೆ

ಶುಕ್ರವಾರ, ಏಪ್ರಿಲ್ 19, 2019
22 °C
ನಗರದಲ್ಲಿ ಮತ್ತೆ ಸರಗಳ್ಳತನ, ಪೊಲೀಸರಿಗೆ ಸವಾಲಾದ ಸರಗಳ್ಳರು

ಗುರುತು ಸಿಗದ ನಾಲ್ವರ ಶವ ಪತ್ತೆ

Published:
Updated:

ಮೈಸೂರು: ಕೆಆರ್‌ಎಸ್‌ ರಸ್ತೆಯ ವಾಣಿವಿಲಾಸ ಜಲಸಂಗ್ರಹಾಗಾರದ ಎದುರು, ಹೆಬ್ಬಾಳ ಮುಖ್ಯರಸ್ತೆಯ ಕಾಳೇಗೌಡ ಕ್ಯಾಂಪಸ್ ಎದುರು, ನಾಗನಹಳ್ಳಿ ಗ್ರಾಮ ಹಾಗೂ ಹಿನಕಲ್‌ ಫ್ಲೈಓವರ್ ಕೆಳಗೆ ನಾಲ್ವರ ಮೃತದೇಹಗಳು ದೊರಕಿವೆ. ಇವರಲ್ಲಿ ಮೂವರು ಪುರುಷರಾದರೆ ಒಬ್ಬರು ಮಹಿಳೆ. ಇವರ ಗುರುತು ಪತ್ತೆಯಾಗಿಲ್ಲ.

ಕೆಆರ್‌ಎಸ್‌ ರಸ್ತೆಯ ವಾಣಿವಿಲಾಸ ಜಲಸಂಗ್ರಹಾಗಾರದ ಎದುರು 45–50 ವರ್ಷ ವಯಸ್ಸಿನ ಪುರುಷ ವ್ಯಕ್ತಿಯೊಬ್ಬರು ಮರವೊಂದಕ್ಕೆ ಟವಲ್‌ನಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ಬಿಳಿ ಬಣ್ಣದ ಬೂದು ಗೆರೆಯುಳ್ಳ ಅರ್ಧ ತೋಳಿನ ಶರ್ಟ್ ಮತ್ತು ಸೀಮೆಂಟ್ ಬಣ್ಣದ ಪ್ಯಾಂಟನ್ನು ಧರಿಸಿದ್ದಾರೆ. ದೇವರಾಜ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇವರ ಗುರುತು ಪತ್ತೆಯಾದವರು ದೂ: 0821– 2418306 ಸಂಪರ್ಕಿಸಬಹುದು.

ಹೆಬ್ಬಾಳ ಮುಖ್ಯರಸ್ತೆಯ ಕಾಳೇಗೌಡ ಕ್ಯಾಂಪಸ್ ಎದುರು 30ರಿಂದ 35 ವರ್ಷ ವಯಸ್ಸಿನ ಪುರುಷ ವ್ಯಕ್ತಿಯೊಬ್ಬರು ಮಲಗಿದ್ದ ಸ್ಥಿತಿಯಲ್ಲಿಯೇ ಮೃತಪಟ್ಟಿದ್ದಾರೆ. ಇವರು ಅತಿಯಾದ ಮದ್ಯಸೇವನೆ ಅಥವಾ ಅನಾರೋಗ್ಯದಿಂದ ಮೃತಪಟ್ಟಿರಬಹುದು ಎಂದು ಊಹಿಸಲಾಗಿದೆ. ಇವರು ಕಪ್ಪು ಮತ್ತು ಬಿಳಿ ಬಣ್ಣದ ಚೆಕ್ಸ್ ಷರ್ಟು, ನೀಲಿ ಬಣ್ಣದ ಜೀನ್ಸ್ ಪ್ಯಾಂಟು ಧರಿಸಿದ್ದಾರೆ. ಪ್ರಕರಣ ಮೇಟಗಳ್ಳಿ ಠಾಣೆಯಲ್ಲಿ ದಾಖಲಾಗಿದೆ. ಗುರುತು ಪತ್ತೆಯಾದವರು ದೂ: 0821– 2418315 ಸಂಪರ್ಕಿಸಬಹುದು.

ನಾಗನಹಳ್ಳಿ ಗ್ರಾಮದ ಮನೆಯೊಂದರಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಬಾಡಿಗೆಗೆ ವಾಸವಿದ್ದ 40 ವರ್ಷ ವಯಸ್ಸಿನ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಇವರು ಅಕ್ಕಪಕ್ಕದವರ ಬಳಿ ತಮ್ಮ ಹೆಸರು ರಾಧಾ ಎಂದಷ್ಟೇ ಹೇಳಿಕೊಂಡಿದ್ದರು. ಇವರ ಊರು ಮತ್ತು ಸಂಬಂಧಿಕರು ಗೊತ್ತಾಗಿಲ್ಲ. ಮೇಟಗಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇವರ ಬಂಧುಗಳು ದೂ: 0821– 2418315 ಸಂಪರ್ಕಿಸಬಹುದು.

ಹಿನಕಲ್ ಫ್ಲೈ ಓವರ್‌ ಕೆಳಗೆ 60ರಿಂದ 65 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಕುರುಚಲು ಗಡ್ಡ ಬಿಟ್ಟಿರುವ ಇವರ ಗುರುತು ಪತ್ತೆಯಾಗಿಲ್ಲ. ಪ್ರಕರಣ ವಿಜಯನಗರ ಠಾಣೆಯಲ್ಲಿ ದಾಖಲಾಗಿದೆ. ಗುರುತು ಪತ್ತೆಯಾದವರು ದೂ: 0821– 2418317 ಸಂಪರ್ಕಿಸಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !