ಬುಧವಾರ, ನವೆಂಬರ್ 20, 2019
27 °C

ಕಾಣೆಯಾಗಿದ್ದ ವ್ಯಕ್ತಿಯ ಶವ ಕೆರೆಯಲ್ಲಿ ಪತ್ತೆ

Published:
Updated:

ಪಿರಿಯಾಪಟ್ಟಣ: ಮೂರು ದಿನಗಳಿಂದ ಕಾಣೆಯಾಗಿದ್ದ ತಾಲ್ಲೂಕಿನ ಬೆಟ್ಟದಪುರ ಗ್ರಾಮದ ಹರೀಶ್ (40) ಎಂಬುವವರು ಗ್ರಾಮದ ತಾವರೆಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಹರೀಶ್ ಅ. 16ರ ಬೆಳಿಗ್ಗೆ ಎಂದಿನಂತೆ ಬಯಲು ಶೌಚಾಲಯಕ್ಕೆಂದು ಹೋಗಿದ್ದು, ಮನೆಗೆ ಬಾರದೆ ಇದ್ದಾಗ ಮೃತರ ಪತ್ನಿ ತುಳಸಿ ಹಾಗೂ ಕುಟುಂಬದವರು ಸಂಬಂಧಿಕರ ಮನೆಯಲ್ಲಿ ಹಾಗೂ ಅಕ್ಕಪಕ್ಕದ ಗ್ರಾಮಗಳಲ್ಲಿ ಹುಡುಕಾಡಿದ್ದಾರೆ. ಹರೀಶ್ ಪತ್ತೆಯಾಗದ ಕಾರಣ ಪತ್ನಿ ತುಳಸಿ ಬೆಟ್ಟದಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಶುಕ್ರವಾರ ಕೆರೆಯಲ್ಲಿ ಶವ ಪತ್ತೆಯಾಗಿದ್ದು, ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ಧಾರೆ. ಮೃತರಿಗೆ ಪತ್ನಿ ತುಳಸಿ, ಇಬ್ಬರು ಮಕ್ಕಳು ಇದ್ದಾರೆ.

ಪ್ರತಿಕ್ರಿಯಿಸಿ (+)