ರಂಗಕಲಾವಿದೆ ಎಸ್.ಎಸ್.ಗಾಯತ್ರಿ ನಿಧನ

ಶುಕ್ರವಾರ, ಏಪ್ರಿಲ್ 19, 2019
22 °C

ರಂಗಕಲಾವಿದೆ ಎಸ್.ಎಸ್.ಗಾಯತ್ರಿ ನಿಧನ

Published:
Updated:
Prajavani

ಮೈಸೂರು: ಹಿರಿಯ ರಂಗ ಕಲಾವಿದರಾದ ಯರಗನಹಳ್ಳಿಯ ರಾಜಕುಮಾರರಸ್ತೆಯ ನಿವಾಸಿ ಎಸ್.ಎಸ್.ಗಾಯತ್ರಿ (68)  ಬುಧವಾರ ನಿಧನ ಹೊಂದಿದರು. ಇವರ ಅಂತ್ಯಕ್ರಿಯೆಯು ಚಾಮುಂಡಿಬೆಟ್ಟದ ತಪ್ಪಲಿನ ಹರಿಶ್ಚಂದ್ರ ಘಾಟ್‌ನಲ್ಲಿ ಮಂಗಳವಾರ ನೆರವೇರಿತು. ಇವರಿಗೆ ಪುತ್ರ, ಸೊಸೆ ಹಾಗೂ ಮೊಮ್ಮಕ್ಕಳು ಇದ್ದಾರೆ.

ಇವರು ಕಳೆದ 55 ವರ್ಷಗಳಿಂದ ರಂಗಭೂಮಿಯಲ್ಲಿ ಸೇವೆ ಸಲ್ಲಿಸಿದ್ದರು. ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಶ್ರೀ ರಾಜೇಶ್ವರಿ ವಸ್ತ್ರಾಲಂಕಾರ ನೀಡುವ ‘ರಂಗದಸರಾ’ ಪ್ರಶಸ್ತಿ, ಕರ್ನಾಟಕ ರಂಗಪರಿಷತ್ತು ಕೊಡಮಾಡುವ ಕನ್ನಡಾಂಬೆ ಕಲಾ ಥಯೇಟರಿಸ್ಟ್ ಪ್ರಶಸ್ತಿಗೆ ಇವರು ಪಾತ್ರರಾಗಿದ್ದರು. ಮೈಸೂರು ಜಿಲ್ಲಾ ಕನ್ನಡ ವೃತ್ತಿರಂಗಭೂಮಿ ಕಲಾವಿದೆಯರ ಸಂಘದ ಕಾರ್ಯದರ್ಶಿಯಾಗಿಯೂ ಇವರು ಸೇವೆ ಸಲ್ಲಿಸಿದ್ದರು.

ಓಬಲೇಶ ಕಂಪೆನಿ, ಕೂಮಾರೇಶ್ವರ ನಾಟ್ಯಸಂಘ, ಕೆಬಿಆರ್‌ ಡ್ರಾಮ ಕಂಪೆನಿ ಸೇರಿದಂತೆ ಅನೇಕ ವೃತ್ತಿ ರಂಗಭೂಮಿಯ ಕಂಪೆನಿಗಳಲ್ಲಿ ಇವರು ಅಭಿನಯಿಸಿದ್ದರು.

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 4

  Sad
 • 0

  Frustrated
 • 0

  Angry

Comments:

0 comments

Write the first review for this !