ಸತ್ಕಾರದ ಹೆಸರಲ್ಲಿ ಲೂಟಿ: ಈಶ್ವರಪ್ಪ

7
ಪದಗ್ರಹಣ ಕಾರ್ಯಕ್ರಮದ ವೆಚ್ಚದ ತನಿಖೆಗೆ ಆಗ್ರಹ

ಸತ್ಕಾರದ ಹೆಸರಲ್ಲಿ ಲೂಟಿ: ಈಶ್ವರಪ್ಪ

Published:
Updated:

ಮೈಸೂರು: ‘ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪದಗ್ರಹಣ ಕಾರ್ಯಕ್ರಮಕ್ಕೆ ಬಂದಿದ್ದ ಅತಿಥಿಗಳ ಸತ್ಕಾರದ ಹೆಸರಿನಲ್ಲಿ ರಾಜ್ಯ ಸರ್ಕಾರವು ತೆರಿಗೆದಾರರ ಹಣವನ್ನು ಲೂಟಿ ಮಾಡಿದೆ. ಪ್ರಕರಣ ಕುರಿತು ತನಿಖೆ ನಡೆಸಬೇಕು’ ಎಂದು ಶಾಸಕ ಕೆ.ಎಸ್‌.ಈಶ್ವರಪ್ಪ ಇಲ್ಲಿ ಶನಿವಾರ ಆಗ್ರಹಿಸಿದರು.

‘ಶಿಷ್ಟಾಚಾರದ ಪ್ರಕಾರ ಸರ್ಕಾರಿ ಕಾರ್ಯಕ್ರಮದಲ್ಲಿ ಮದ್ಯ ಪೂರೈಕೆ ಮಾಡುವಂತಿಲ್ಲ. ಆದರೆ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಹೆಸರಿನಲ್ಲಿ ಮದ್ಯ ಪೂರೈಸಲಾಗಿದೆ. ತಮ್ಮ ವಾಸ್ತವ್ಯಕ್ಕೆ ಮಾಡಿರುವ ಖರ್ಚಿನ ಬಗ್ಗೆ ಅತಿಥಿಗಳೇ ಅಚ್ಚರಿ ವ್ಯಕ್ತಪಡಿಸಿದ್ದಾರೆ. ನಿಜವಾಗಿಯೂ ಇಷ್ಟು ಖರ್ಚು ಆಗಿದೆಯೇ? ಕುಮಾರಸ್ವಾಮಿ ಒಪ್ಪಿಗೆ ಇಲ್ಲದೆಯೇ ಬಿಲ್‌ ಪಾವತಿಸಲಾಗಿದೆಯೇ’ ಎಂದು ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.

ಆಯೋಗಕ್ಕೆ ಪತ್ರ: ‘ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಣೆ ಆಗಿ ನೀತಿ ಸಂಹಿತೆ ಜಾರಿ ಆಗಿದ್ದರೂ ವರ್ಗಾವಣೆ ದಂಧೆ ಅವ್ಯಾವಹತವಾಗಿ ಮುಂದುವರೆದಿದೆ. ಎರಡು ದಿನಗಳ ಹಿಂದೆಯಷ್ಟೇ ತಹಶೀಲ್ದಾರ್‌ಗಳನ್ನು ವರ್ಗಾವಣೆ ಮಾಡಲಾಗಿದೆ. ಈ ಕುರಿತು ಚುನಾವಣಾ ಆಯೋಗಕ್ಕೆ ಪತ್ರ ಬರೆಯುತ್ತೇನೆ’ ಎಂದರು.

ಗಿಮಿಕ್: ‘ಮುಖ್ಯಮಂತ್ರಿ ಕುಮಾರಸ್ವಾಮಿ ಭತ್ತ ನಾಟಿ ಮಾಡುತ್ತಿರುವುದು ಕೇವಲ ಒಂದು ಗಿಮಿಕ್. ಕುರುಬರಿಗೆ ಕುರಿ ಕಾಯಲು ಗೊತ್ತಿಲ್ಲವೇ? ರೈತರಿಗೆ ನಾಟಿ ಮಾಡುವುದು ಗೊತ್ತಿಲ್ಲವೇ? ಕುಮಾರಸ್ವಾಮಿ ಹೇಳಿಕೊಡಬೇಕೆ’ ಎಂದು ಪ್ರಶ್ನಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !