ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಲ್ಲಹಳ್ಳಿ ಗ್ರಾ.ಪಂ. ಮೇಲ್ದರ್ಜೆಗೇರಿಸಲು ಆಗ್ರಹ

Last Updated 15 ಅಕ್ಟೋಬರ್ 2020, 16:48 IST
ಅಕ್ಷರ ಗಾತ್ರ

ಮೈಸೂರು: ಪಟ್ಟಣ ಪಂಚಾಯಿತಿಯಾಗುವ ಎಲ್ಲ ಅರ್ಹತೆ ಹೊಂದಿದ್ದರೂ ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ ಇಂದಿಗೂ ಗ್ರಾಮ ಪಂಚಾಯಿತಿಯಾಗಿಯೇ ಉಳಿದಿದೆ ಎಂದು ಆರ್‌ಟಿಐ ಕಾರ್ಯಕರ್ತ ಚಂದ್ರ ಅಸಮಾಧಾನ ವ್ಯಕ್ತಪಡಿಸಿದರು.

ಹುಲ್ಲಹಳ್ಳಿಯಲ್ಲಿ 12 ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆಯಿದೆ. ಊರು ಸಾಕಷ್ಟು ಪ್ರಗತಿ ಕಂಡಿದೆ. ಹೂಟಗಳ್ಳಿ, ಇಲವಾಲ, ಕಡಕೊಳ, ಆಲನಹಳ್ಳಿ ಗ್ರಾಮಗಳಂತೆ ಮುಂದುವರೆದ ಪಟ್ಟಣ ಪ್ರದೇಶದಂತಿದ್ದರೂ, ರಾಜ್ಯ ಸರ್ಕಾರ ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗುರುವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಿಡಿಕಾರಿದರು.

ಸರ್ಕಾರದ ಸುಪರ್ದಿಗೆ: ಯತ್ನ ಕೈಬಿಡಿ
ಮೈಸೂರು:
ಚಿಕ್ಕಲ್ಲೂರು ಸಿದ್ದಪ್ಪಾಜಿ ಹೊಸಮಠವನ್ನು ಸರ್ಕಾರದ ಸುಪರ್ಧಿಗೆ ವಹಿಸಿ, ಪ್ರಾಧಿಕಾರ ರಚಿಸಲು ಕೆ.ಪಿ.ನಂಜುಂಡಿ ಮುಂದಾಗಿರುವ ವಿಚಾರಕ್ಕೆ ವಿಶ್ವಕರ್ಮ ಸಮುದಾಯದ ವಿರೋಧವಿದ್ದು, ತಕ್ಷಣದಿಂದಲೇ ಈ ವಿಚಾರ ಕೈ ಬಿಡಬೇಕು ಎಂದು ಶ್ರೀಕ್ಷೇತ್ರ ಚಿಕ್ಕಲ್ಲೂರು ಹೊಸಮಠ ಟ್ರಸ್ಟ್‌ನ ಪದಾಧಿಕಾರಿಗಳು ಆಗ್ರಹಿಸಿದರು.

‘ಚಿಕ್ಕಲ್ಲೂರು ಕ್ಷೇತ್ರವನ್ನು ಟ್ರಸ್ಟ್ ಮೂಲಕ ಅನೇಕ ವರ್ಷಗಳಿಂದ ಅಭಿವೃದ್ಧಿ ಪಡಿಸಿಕೊಂಡು ಬರಲಾಗಿದೆ. ಕೆ.ಪಿ.ನಂಜುಂಡಿ ಈಚೆಗೆ ಮಠದ ಅಧ್ಯಕ್ಷರಾಗಲು ಆಸಕ್ತಿ ತೋರುತ್ತಿದ್ದಾರೆ. ಇದಕ್ಕೆ ವಿರೋಧ ವ್ಯಕ್ತವಾಗಿದ್ದರಿಂದ ಪ್ರಾಧಿಕಾರ ರಚನೆಗೆ ಯತ್ನಿಸುತ್ತಿದ್ದಾರೆ’ ಎಂದುಟ್ರಸ್ಟ್‌ನ ಅಧ್ಯಕ್ಷ ಸಿದ್ದಪ್ಪಾಜಿ ಗುರುವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

ವಿಶ್ವಕರ್ಮ ಸಮುದಾಯದ ಮುಖಂಡ ಪುಟ್ಟಸ್ವಾಮಾಚಾರ್ ಆನಂದೂರು, ಬಿಜೆಪಿ ಮುಖಂಡ ಎಚ್.ಆರ್.ರಂಗಪ್ಪ ಮಾತನಾಡಿ ಕೆ.ಪಿ.ನಂಜುಂಡಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮಹದೇಶ್ವರ ದೇಗುಲ ಉದ್ಘಾಟನೆ 19ಕ್ಕೆ
ಮೈಸೂರು:
ನಗರದ ಮಾನಂದವಾಡಿ ರಸ್ತೆಯ ಆಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಮಲೈ ಮಹದೇಶ್ವರ ಸ್ವಾಮಿ ದೇಗುಲವನ್ನು ಅ.19ರ ಸೋಮವಾರ ಸಂಜೆ ಉದ್ಘಾಟಿಸಲಾಗುವುದು ಎಂದು ದೇವಾಲಯದ ನಿರ್ಮಾತೃ ಆರ್.ರಂಗಸ್ವಾಮಿ ಗುರುವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT