ಹುಲಿಯ ಮೃತದೇಹ ಪತ್ತೆ: ಮರಣೋತ್ತರ ಪರೀಕ್ಷೆ ಪೂರ್ಣ

ಭಾನುವಾರ, ಜೂಲೈ 21, 2019
25 °C

ಹುಲಿಯ ಮೃತದೇಹ ಪತ್ತೆ: ಮರಣೋತ್ತರ ಪರೀಕ್ಷೆ ಪೂರ್ಣ

Published:
Updated:

ಎಚ್.ಡಿ.ಕೋಟೆ: ತಾಲ್ಲೂಕಿನ ಟೈಗರ್ ಬ್ಲಾಕ್ ಬಳಿಯ ಹೆಬ್ಬಳ್ಳ ಜಲಾಶಯದ ಹಿನ್ನೀರಿನ ಬದಿಯಲ್ಲಿ ಹುಲಿಯ ಮೃತದೇಹವು ಪತ್ತೆಯಾಗಿದೆ.

10 ವರ್ಷದ ಹೆಣ್ಣು ಹುಲಿ ಸ್ವಾಭಾವಿಕವಾಗಿ ಮೃತಪಟ್ಟಿರಬಹುದು ಎಂದು ಪಶುವೈದ್ಯ ಡಾ. ನಾಗರಾಜ್ ತಿಳಿಸಿದ್ದಾರೆ.

ಹುಲಿಯ ಅಂಗಾಂಗಗಳನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳಿಸಲು ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಹುಲಿಯ ದೇಹದಲ್ಲಿ ಹೊಡೆದಾಟದಿಂದ ಸಾಕಷ್ಟು ಕಡೆ ಗಾಯಗಳಾಗಿದ್ದು ಹುಲಿಯ ಕೆಲವು ಹಲ್ಲುಗಳು ಮುರಿದುಹೋಗಿವೆ. ಇದರಿಂದಾಗಿ ಅದು ಬೇಟೆಯಾಡುವ ಶಕ್ತಿಯನ್ನು ಕಳೆದುಕೊಂಡಿತ್ತು ಎಂದು ಪ್ರತಿಕ್ರಿಯಿಸಿದ್ದಾರೆ.


ಹುಲಿಯ ಮರಣೋತ್ತರ ಪರೀಕ್ಷೆ ನಡೆಸಲಾಯಿತು.

ಸ್ಥಳಕ್ಕೆ ಅರಣ್ಯ ಇಲಾಖೆಯ ಡಿಸಿಎಫ್ ಪ್ರಶಾಂತ್ ಕುಮಾರ್, ಎಸಿಎಫ್ ಪರಮೇಶ್ವರಪ್ಪ, ವನ್ಯಜೀವಿ ವಾರ್ಡನ್ ಕೃತಿಕಾ, ಎಎಸ್ಐ ನಾರಾಯಣಸ್ವಾಮಿ, ಸಾಮಾಜಿಕ ವಲಯ ಅರಣ್ಯಾಧಿಕಾರಿ ಮಧು  ಇದ್ದರು.

ಈ ಮೊದಲು ಹುಲಿಗೆ ವಿಷ ಹಾಕಲಾಗಿದೆ ಎಂಬ ಶಂಕೆ ವ್ಯಕ್ತವಾಗಿತ್ತು.


 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !