ಮಂಗಳವಾರ, ಡಿಸೆಂಬರ್ 1, 2020
21 °C

ಬೆದರಿಸಿ, ಹಲ್ಲೆ ಮಾಡಿ ಸುಲಿಗೆ ಮಾಡುತ್ತಿದ್ದವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಬೆದರಿಕೆ ಒಡ್ಡಿ ಹಾಗೂ ಹಲ್ಲೆ ನಡೆಸಿ ಸುಲಿಗೆ ಮಾಡುತ್ತಿದ್ದ ಇಬ್ಬರನ್ನು ಉದಯಗಿರಿ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಕಲ್ಯಾಣಗಿರಿ ನಿವಾಸಿ ಮೊಹಮ್ಮದ್ ಜಮೀರ್ ಉರ್ ರೆಹಮಾನ್ (20), ರಾಘವೇಂದ್ರ ಬಡಾವಣೆಯ ಶೋಯಬ್ ಅಕ್ತರ್ (21) ಬಂಧಿತರು. ಇವರಿಂದ ₹ 45 ಸಾವಿರ ಮೌಲ್ಯದ ಲ್ಯಾಪ್‌ಟಾಪ್‌, 1 ಮೊಬೈಲ್‌, ದ್ವಿಚಕ್ರ ವಾಹನ ಮತ್ತು ಚಾಕುವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.‌

ನ. 13ರಂದು ಶಕ್ತಿನಗರದಲ್ಲಿ ಶ್ರೀರಾಗ್ ಎಂಬುವವರು ಹೂ ಬಿಡಿಸುತ್ತಿದ್ದಾಗ ದ್ವಿಚಕ್ರ ವಾಹನದಲ್ಲಿ ಬಂದ ಇವರು, ಚಾಕುವಿನಿಂದ ಕುತ್ತಿಗೆ ಭಾಗದಲ್ಲಿ ಹಲ್ಲೆ ಮಾಡಿ ಮೊಬೈಲ್‌ನ್ನು ಕಸಿದುಕೊಂಡಿದ್ದರು. ಅದೇ ದಿನ ಸಂಜೆ ಕಲ್ಯಾಣಗಿರಿಯಲ್ಲಿ ಮೊಹಮ್ಮದ್ ಜವಾದ್ ಎಂಬುವವರು ತಮ್ಮ ಮನೆಯಲ್ಲಿ ಒಬ್ಬರೇ ಇದ್ದಾಗ ಬೆದರಿಸಿ ಲ್ಯಾಪ್‌ಟಾಪ್‌ ಕಿತ್ತುಕೊಂಡು ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮೊಬೈಲ್ ಮತ್ತು ಲ್ಯಾಪ್‌ಟಾಪ್‌ನ್ನು ಮಾರಾಟ ಮಾಡಲು ಯತ್ನಸುತ್ತಿದ್ದಾಗ ಇವರು ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಇನ್‌ಸ್ಪೆಕ್ಟರ್ ಪೂಣಚ್ಚ, ಪಿಎಸ್‌ಐ ಎಂ.ಜೈಕೀರ್ತಿ, ನಟರಾಜ್, ಎ.ಎಸ್.ಐ. ದಿವಾಕರ್ ಹಾಗೂ ಸಿಬ್ಬಂದಿಯಾದ ಎಂ.ಶಂಕರ್, ಸಿದ್ದಿಕ್ ಅಹಮದ್, ಮೋಹನ್‌ಕುಮಾರ್, ಕೃಷ್ಣ, ಆರ್.ಎಸ್.ಶಿವರಾಜಪ್ಪ, ಮಾಲತಿ ಕಾರ್ಯಾಚರಣೆ ತಂಡದಲ್ಲಿದ್ದರು.

ಬೈಕ್‌ ಡಿಕ್ಕಿ; ಪಾದಾಚಾರಿ ಸಾವು

ಮೈಸೂರು: ಇಲ್ಲಿನ ಕೆಆರ್‌ಎಸ್‌ ರಸ್ತೆಯಲ್ಲಿ ಸೋಮವಾರ ರಾತ್ರಿ ಕೆಐಎಡಿಬಿ ಕಚೇರಿ ಸಮೀಪ ನಡೆದುಕೊಂಡು ಹೋಗುತ್ತಿದ್ದ ಸಿದ್ಧರಾಜು (45) ಎಂಬುವವರಿಗೆ ಹಿಂದಿನಿಂದ ಬಂದ ಬೈಕೊಂದು ಡಿಕ್ಕಿ ಹೊಡೆದಿದೆ. ಇದರಿಂದ ತೀವ್ರವಾಗಿ ಗಾಯಗೊಂಡ ಇವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೇ ಇವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವಿ.ವಿ ಪುರಂ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು