ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: 3 ದಿನ ದೇವರಾಜ ಮಾರುಕಟ್ಟೆ ಬಂದ್

Last Updated 21 ಅಕ್ಟೋಬರ್ 2020, 8:17 IST
ಅಕ್ಷರ ಗಾತ್ರ

ಮೈಸೂರು: ಆಯುಧ ಪೂಜೆ, ವಿಜಯದಶಮಿ ಹಬ್ಬದ ಆಚರಣೆಗಾಗಿ ಹೂವು–ಹಣ್ಣು ಸೇರಿದಂತೆ ಇನ್ನಿತರೆ ಸಾಮಗ್ರಿ ಖರೀದಿಗಾಗಿ ಜನರು ಮುಗಿಬೀಳುವುದರಿಂದ, ಮಹಾನಗರ ಪಾಲಿಕೆ ಆಡಳಿತ ಕೋವಿಡ್‌ ಹರಡುವಿಕೆಯನ್ನು ತಡೆಗಟ್ಟುವ ಮುನ್ನೆಚ್ಚರಿಕೆ ಕ್ರಮವಾಗಿ ದೇವರಾಜ ಮಾರುಕಟ್ಟೆಯ ವಹಿವಾಟನ್ನು ಮೂರು ದಿನ ಸ್ಥಗಿತಗೊಳಿಸಿ ಆದೇಶ ಹೊರಡಿಸಿದೆ.

ಅ.23, 24, 25ರಂದು ದೇವರಾಜ ಮಾರುಕಟ್ಟೆ ಕಾರ್ಯಾಚರಿಸಲ್ಲ. ಈ ದಿನಗಳಲ್ಲಿ ಜನರು, ರೈತರು ಹಾಗೂ ವ್ಯಾಪಾರಿಗಳ ಅನುಕೂಲಕ್ಕಾಗಿ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿರುವ ಜೆ.ಕೆ. ಗ್ರೌಂಡ್ಸ್‌ನಲ್ಲಿ ವಹಿವಾಟು ನಡೆಸಲು ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ತಮ್ಮ ಆದೇಶದಲ್ಲಿ ಅನುಮತಿ ನೀಡಿದ್ದಾರೆ.

ಮೂರು ದಿನವೂ ಹೂವಿನ ವ್ಯಾಪಾರ ಜೆ.ಕೆ.ಮೈದಾನದಲ್ಲಿ ನಡೆಯಲಿದ್ದು, ಪಾಲಿಕೆ ಆಡಳಿತ ವಹಿವಾಟಿಗೆ ಪೂರಕವಾದ ವ್ಯವಸ್ಥೆ ಕಲ್ಪಿಸಲು ಕ್ರಮಕೈಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT