ಮೈಸೂರು: ತಾಲ್ಲೂಕಿನ ಕರಕನಹಳ್ಳಿಯ ಚಿಕ್ಕಕೆರೆಯನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ವತಿಯಿಂದ ಅಭಿವೃದ್ಧಿಪಡಿಸಿ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಗುರುವಾರ ಗ್ರಾಮಸ್ಥರಿಗೆ ಹಸ್ತಾಂತರಿಸಿದರು.
ಇದಕ್ಕೂ ಮುನ್ನ ಅವರು ಕೆರೆಗೆ ಬಾಗಿನ ಅರ್ಪಿಸಿದರು.
4.34 ಎಕರೆ ವಿಸ್ತೀರ್ಣದ ಈ ಕೆರೆ ಕಳೆದ 20 ವರ್ಷಗಳಿಂದ ತುಂಬಿರಲಿಲ್ಲ. ಒಂದು ವರ್ಷದಲ್ಲಿ ಟ್ರಸ್ಟ್ ಈ ಕೆರೆಯನ್ನು ₹ 5.72 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಪಡಿಸಿದೆ. ಈ ಕೆರೆಯಿಂದ 150 ಕುಟುಂಬಗಳಿಗೆ ಪ್ರಯೋಜನವಾಗಿದ್ದು, 20 ಬೋರ್ ವೆಲ್ ಗಳು ಜಲಮರುಪೂರಣಗೊಂಡಿದೆ. ಸುಮಾರು 1 ಸಾವಿರ ಜಾನುವಾರುಗಳಿಗೆ ಕುಡಿಯಲು ಸಹಕಾರಿಯಾಗಿದೆ.
ಟ್ರಸ್ಟ್ ವತಿಯಿಂದ ಪುನಶ್ಚೇತನಗೊಳಿಸಿದ 299 ನೇ ಕೆರೆ ಇದಾಗಿದೆ. ಮೈಸೂರು ಜಿಲ್ಲೆಯಲ್ಲಿ ಒಟ್ಟು 30 ಕೆರೆಗಳನ್ನು ಒಂದು ವರ್ಷದಲ್ಲಿ ಪುನಶ್ಚೇತನಗೊಳಿಸಿದ್ದು, ಈಗ ಅವುಗಳೆಲ್ಲ ನೀರಿನಿಂದ ತುಂಬಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.