ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ವೈದ್ಯನ ಬಂಧನ

Last Updated 22 ಮೇ 2019, 9:25 IST
ಅಕ್ಷರ ಗಾತ್ರ

ತಲಕಾಡು: ವೈದ್ಯನೆಂದು ಹೇಳಿಕೊಂಡು ರೋಗಿಗಳಿಗೆ ಔಷಧ ನೀಡುತ್ತಿದ್ದ ವೇದಮೂರ್ತಿ ಎಂಬಾತನನ್ನು ಮಂಗಳವಾರ ಬಂಧಿಸಲಾಗಿದೆ.

ಈತ ಮೊದಲು ಶಾಮಿಯಾನ ಅಂಗಡಿ ಇಟ್ಟುಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದ. ನಂತರ ಕೆಲವು ಆಯುರ್ವೇದ ಮತ್ತು ನಾಟಿ ಔಷಧಗಳನ್ನು ನೀಡಲಾರಂಭಿಸಿದ. ಈ ಕುರಿತು, ‘ಫೇಸ್‌ಬುಕ್‌’ ಪುಟದಲ್ಲಿ ಸಾಕಷ್ಟು ಪ್ರಚಾರವನ್ನೂ ನಡೆಸಿದ್ದ. ‘ಡಾಕ್ಟರ್ ಮೂರ್ತಿ, ಎಂಬಿಬಿಎಸ್’ ಎಂದು ಹೇಳಿಕೊಂಡು, 45ಕ್ಕೂ ಹೆಚ್ಚು ಕಾಯಿಲೆಗಳಿಗೆ ಚಿಕಿತ್ಸೆ ನೀಡಿ ಗುಣಪಡಿಸಿದ್ದಾಗಿ ಬರೆದುಕೊಂಡಿದ್ದ.

ಫೇಸ್‌ಬುಕ್‌ ಮೂಲಕ ಪರಿಚಯವಾದ ಹಲವಾರು ಜನರು ಈತನಿಂದ ಔಷಧಿ ಪಡೆದಿದ್ದರು. ಮಾಂಬಳ್ಳಿ ನಿವಾಸಿ ಚಂದ್ರಶೇಖರ ಎಂಬುವವರು ಈತನನ್ನು ಹುಡುಕಿಕೊಂಡು ಗ್ರಾಮಕ್ಕೆ ಬಂದಾಗ, ಸ್ಥಳೀಯರಿಂದ ನಿಜಾಂಶ ತಿಳಿದುಬಂದಿದೆ. ಚಂದ್ರಶೇಖರ ದೂರು ಆಧರಿಸಿ ಹೀಗಾಗಿ, ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ತಿ.ನರಸೀಪುರ ತಾಲ್ಲೂಕು ವೈದ್ಯಾಧಿಕಾರಿ ಡಾ.ರವಿಕುಮಾರ್, ‘ಪೌಡರ್‌ಗಳನ್ನು ನೀಡುವ ಮೂಲಕ ಕ್ಯಾನ್ಸರ್‌ ಸೇರಿದಂತೆ ಇನ್ನಿತರ ಕಾಯಿಲೆಗಳಿಗೆ ಔಷಧ ನೀಡಲಾಗುವುದು ಎಂದು ಫೇಸ್‌ಬುಕ್‌ನಲ್ಲಿ ಪ್ರಚಾರ ಮಾಡುತ್ತಿದ್ದ. ಈತನನ್ನು ಸಂಪರ್ಕಿಸಿದವರಿಗೆ ಔಷಧ ನೀಡುತ್ತಿದ್ದ. ಈತ ವೈದ್ಯ ಅಲ್ಲ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT