ಭಾನುವಾರ, ಸೆಪ್ಟೆಂಬರ್ 19, 2021
29 °C

ಮೈಸೂರು: ರಾಮಕೃಷ್ಣನಗರದಲ್ಲಿ ನಾಯಿ ಕಚ್ಚಿ ಇಬ್ಬರಿಗೆ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಮೈಸೂರು: ಇಲ್ಲಿನ ರಾಮಕೃಷ್ಣನಗರದಲ್ಲಿ ಗುರುವಾರ ನಾಯಿಯೊಂದು ಬಾಲಕ ಸೇರಿದಂತೆ ಇಬ್ಬರಿಗೆ ಕಚ್ಚಿ ಗಾಯಗೊಳಿಸಿದೆ.

ನಟರಾಜು ಎಂಬುವವರ 4 ವರ್ಷದ ಮೊಮ್ಮಗು ಹಾಗೂ ನಿವಾಸಿಯೊಬ್ಬರಿಗೆ ಕಚ್ಚಿದೆ. ನಂತರ, ಸಿಕ್ಕಸಿಕ್ಕವರ ಮೇಲೆ ಎರಗಿದೆ.

ರಾಮಕೃಷ್ಣನಗರದ ಇ ಮತ್ತು ಎಫ್ ಬ್ಲಾಕ್‌ನಲ್ಲಿ ನಾಯಿ ಬೆನ್ನಟ್ಟಿದೆ. ಈ ಕುರಿತು ಪಾಲಿಕೆ ಸಹಾಯವಾಣಿ ಹಾಗೂ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಪಾಲಿಕೆಯವರು ಎನ್‌ಜಿಒ ಒಂದರ ಸಂಖ್ಯೆ ನೀಡಿ ವಿಷಯ ತಿಳಿಸಲು ಹೇಳಿದರು. ಆದರೆ, ಅವರು ನೀಡಿದ ಸಂಖ್ಯೆಗೆ ಫೋನ್ ಕರೆ ಹೋಗಲಿಲ್ಲ ಎಂದು ನಿವಾಸಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ಕೆ.ಆರ್.ಆಸ್ಪತ್ರೆಯಲ್ಲಿ ರೇಬಿಸ್ ವಿರೋಧಿ ಲಸಿಕೆಗೆ ಕೊರತೆಯಿಲ್ಲ. ಅಗತ್ಯವಿದ್ದವರು ಪಡೆಯಬಹುದು ಎಂದು ಆಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿ ಡಾ.ರಾಜೇಶ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಈಚೆಗೆ ಬಾಲಕನೊಬ್ಬ ಬೀದಿ ನಾಯಿ ಕಡಿತದಿಂದ ಮೃತಪಟ್ಟಿದ್ದ. ಜತೆಗೆ, ಬುಧವಾರವಷ್ಟೇ ಮತ್ತೆ ಇಬ್ಬರು ಬಾಲಕರು ನಾಯಿ ಕಡಿತದಿಂದ ಗಾಯಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು