ಗುರುವಾರ , ಜನವರಿ 21, 2021
17 °C
ಕಾಡು ಹಂದಿಗಳ ಬೇಟೆಗಾಗಿ ನಾಡಬಾಂಬ್ ಇಡುವ ಬೇಟೆಗಾರರು

ನಾಡಬಾಂಬ್ ಕಚ್ಚಿದ ಸಾಕುನಾಯಿ ಸಾವು; ದೂರು ದಾಖಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಎಚ್.ಡಿ.ಕೋಟೆ: ತಾಲ್ಲೂಕಿನ ಟೈಗರ್‌ ಬ್ಲಾಕ್‌ ಗ್ರಾಮದ ರೈತ ಆರ್ಮುಗಂ ಜಮೀನಿನಲ್ಲಿ ನಾಡ ಬಾಂಬ್‌ಗೆ ಅವರ ಸಾಕು ನಾಯಿ ಬಲಿಯಾಗಿದೆ.

ಹಂದಿಗಳ ಬೇಟೆಗಾಗಿ ಅಡಿಕೆ ಕಾಯಿ ಗಾತ್ರದಲ್ಲಿ ನಾಡ ಬಾಂಬ್‌ ತಯಾರಿಸಿ ಕೋಳಿಯ ಮಾಂಸದ ಜೊತೆ ಹಂದಿಗಳ ಓಡಾಟ ಇರುವ ಕಡೆಗಳಲ್ಲಿ ರೈತರ ಜಮೀನುಗಳಲ್ಲಿಯೇ ಇಡುತ್ತಾರೆ ಎಂದು ಆರ್ಮುಗಂ ತಿಳಿಸಿದರು.

ಈ ಸಂಬಂಧ ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ಗುರುವಾರ ದೂರು ನೀಡಲಾಗಿದ್ದು, ಆರೋಪಿಗಳನ್ನು ತಕ್ಷಣವೇ ಪತ್ತೆ ಹಚ್ಚಿ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.

‘ಗ್ರಾಮದಲ್ಲಿ ಬೇಟೆಗಾರರ ತಂಡವಿದ್ದು ರೈತರ ಜಮೀನು ಮತ್ತು ಸಾಮಾಜಿಕ ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿದೆ. ಕೋಳಿಯ ಮಾಂಸದೊಂದಿಗೆ ಸಿಡಿಮದ್ದನ್ನು ಅಡಗಿಸಿಟ್ಟು, ಕಾಡು ಹಂದಿಯನ್ನು ಬೇಟೆಯಾಡುತ್ತಾರೆ. ಬೇಟೆಗಾರರ ಹಾವಳಿ ಅಧಿಕವಾಗಿದ್ದು, ಇವರು ಅಡಗಿಸಿಟ್ಟ ಸಿಡಿಮದ್ದನ್ನು ತಿನ್ನಲು ಹೋದ ನಾಯಿ ಸತ್ತಿದೆ. ಮನುಷ್ಯರು ಏನಾದರೂ ಇದನ್ನು ತುಳಿದಿದ್ದರೂ ಸಹ ಅಪಾಯವಾಗುತ್ತಿತ್ತು, ಪೊಲೀಸರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಈ ಕುರಿತು ಗಮನಹರಿಸಬೇಕು’ ಎಂದು ಆರ್ಮುಗಂ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು