ಇಳಿಮುಖವಾಗದ ಪ್ರವಾಹ: ಮುಂದುವರಿದ ಗಂಜಿ ಕೇಂದ್ರ

7

ಇಳಿಮುಖವಾಗದ ಪ್ರವಾಹ: ಮುಂದುವರಿದ ಗಂಜಿ ಕೇಂದ್ರ

Published:
Updated:
Deccan Herald

ವರುಣಾ: ಬೊಕ್ಕಹಳ್ಳಿ ಗ್ರಾಮದ ಶಾಲೆಯ ಕೊಠಡಿಯಲ್ಲಿ ಭಾನುವಾರ ಕೂಡ ಜನ ಗಂಜಿ ಕೇಂದ್ರದಲ್ಲಿ ಆಸರೆ ಪಡೆಯಬೇಕಾಯಿತು.

ಗ್ರಾಮದ ಸುಮಾರು 10 ಕುಟುಂಬಗಳ ಎಂಬತ್ತು ಸದಸ್ಯರಿಗೆ ದಾಸೋಹ ಭವನದಲ್ಲಿ ವ್ಯವಸ್ಥೆ ಮಾಡಲಾಗಿದೆ. ತಾತ್ಕಾಲಿಕವಾಗಿ ಆಸ್ಪತ್ರೆ ಹಾಗೂ ಚಿಕಿತ್ಸೆ ವ್ಯವಸ್ಥೆ ಮಾಡಲಾಗಿದೆ ಎಂದು ಛತ್ರ ಹೋಬಳಿಯ ಉಪ ತಹಶೀಲ್ದಾರ್ ಬಾಲಸುಬ್ರಹ್ಮಣ್ಯಂ ತಿಳಿಸಿದರು.

ಪ್ರವಾಹದಿಂದ 21 ಮನೆಗಳಿಗೆ ಹಾನಿಯಾಗಿದೆ. ಮುಂಜಾಗ್ರತಾ ಕ್ರಮವಾಗಿ ಆ ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ ಎಂದು ಅವರು ತಿಳಿಸಿದರು.

ಕಂದಾಯ ಇಲಾಖೆಯ ನಿರೀಕ್ಷಕ ಕೃಷ್ಣಚಾರಿ, ಗ್ರಾಮ ಲೆಕ್ಕಿಗ ಬಾಬು ಸೇರಿದಂತೆ ಗ್ರಾಮಾಡಳಿತದ ಅಧಿಕಾರಿಗಳು  ಸ್ಥಳದಲ್ಲಿ ಮುಕ್ಕಾಂ ಹೂಡಿದ್ದಾರೆ.

ಭಾನುವಾರ ಸಂಜೆವರಗೆ ಕಪಿಲಾ ನದಿ ಪ್ರವಾಹ ಇಳಿಮುಖವಾಗದೆ ಯಥಾ ಸ್ಥಿತಿ ಇತ್ತು. ಗದ್ದೆ ಹಾಗೂ ತೋಟಗಳಿಗೆ ನೀರು ಬಂದು ರೈತರಿಗೆ ಅಪಾರ ನಷ್ಟ ವಾಗಿದೆ.

ಸುತ್ತೂರು ಸೇತುವೆ ಮುಳುಗಡೆಯಾಗಿದ್ದು, ಭಾನುವಾರ ಕೂಡ ವಾಹನ ಸಂಚಾರ ಸ್ಥಗಿತವಾಗಿದೆ ಎಂದು ಬಿಳಿಗೆರೆ ಎಸ್.ಐ ಸತೀಶ್ ತಿಳಿಸಿದರು.

ನಗರ್ಲೆ, ಬಿಳಿಗೆರೆ, ಬಿಳುಗಲಿ, ಸರಗೂರು, ತುಮ್ಮನೇರಳೆ, ಹೊಸಕೋಟೆ ಇನ್ನಿತರ ಪ್ರದೇಶದ ಅನೇಕ ಗದ್ದೆಗಳು ಮತ್ತು ಹೂವಿನ ತೋಟಗಳು ಪ್ರವಾಹದಲ್ಲಿ ಮುಳುಗಡೆಯಾಗಿದೆ.

ನಗರ್ಲೆ ಗ್ರಾಮಕ್ಕೆ ತೋಟಗಾರಿಕೆ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಪಡೆದರು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !