ವರದಕ್ಷಿಣೆ ಕಿರುಕುಳ: ತಾಯಿ, ಮಗು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ 

7

ವರದಕ್ಷಿಣೆ ಕಿರುಕುಳ: ತಾಯಿ, ಮಗು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ 

Published:
Updated:

ಮೈಸೂರು: ವರದಕ್ಷಿಣೆ ಕಿರುಕುಳಕ್ಕೆ ಬೆಸತ್ತು ತಾಯಿ ಮಗು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಮಹದೇವಪುರದಲ್ಲಿ ಶನಿವಾರ ನಡೆದಿದೆ.  

ಗೌರಮ್ಮ (24) ಮಗು ನಿಯಾಲ್ (2) ಮೃತ ದುರ್ದೈವಿಗಳು. 

ಕೆ.ಆರ್.ಪೇಟೆ ಮೂಲದ ಗೌರಮ್ಮ 3 ವರ್ಷದ ಹಿಂದೆ ಮೈಸೂರಿನ ಲೋಹಿತ್‌ ಅವರನ್ನು ಮದುವೆಯಾಗಿದ್ದರು.  

ಮದುವೆ ಸಮಯದಲ್ಲಿ ಸಾಕಷ್ಟು ವರದಕ್ಷಿಣೆ ನೀಡಲಾಗಿತ್ತು. ಆದರೆ ಹಣಕ್ಕಾಗಿ ಪತಿಯ ಮನೆಯವರು ನಿತ್ಯ ಕಿರುಕುಳ ನೀಡುತ್ತಿದ್ದರು ಎಂದು ಹೇಳಲಾಗಿದೆ.  

ಪತಿ ಲೋಹಿತ್ ಮಾಲೂರಿನಲ್ಲಿ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಶುಕ್ರವಾರ ತಡರಾತ್ರಿ ಮನೆಯ ಕೊಠಡಿಯಲ್ಲಿ ಗೌರಮ್ಮ, ಮಗ ನಿಯಾಲ್‌ಗೆ ಬೆಂಕಿ ಹಚ್ಚಿ ತಾನೂ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಘಟನೆ ಸಂಬಂಧ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !