ಮೈಸೂರು: ಗಾಂಜಾ ಸಾಗಾಣೆ, ಇಬ್ಬರ ಬಂಧನ

7

ಮೈಸೂರು: ಗಾಂಜಾ ಸಾಗಾಣೆ, ಇಬ್ಬರ ಬಂಧನ

Published:
Updated:

ಮೈಸೂರು: ಇಲ್ಲಿನ ನಜರ್‌ಬಾದ್‌ನಲ್ಲಿರುವ ಇಂದಿರಾ ಕ್ಯಾಂಟೀನ್ ಮುಂಭಾಗದ ಪಾದಾಚಾರಿ ಮಾರ್ಗದಲ್ಲಿ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಉದಯಗಿರಿಯ ದೇವನೂರು ಕೆರೆ ನಿವಾಸಿ ಬದ್ರುನ್ನೀಸ (30) ಹಾಗೂ ಕಲ್ಯಾಣಗಿರಿಯ ಕೆಎಚ್‌ಬಿ ಕಾಲೊನಿ ನಿವಾಸಿ ಇಸ್ಮಾಯಿಲ್ ಷರೀಫ್ (52) ಎಂಬುವವರನ್ನು ಅಪರಾಧ ಪತ್ತೆ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಇವರಿಂದ 269 ಗ್ರಾಂ ತೂಕದ ಗಾಂಜಾ ಮತ್ತು ₹ 580 ನಗದನ್ನು ವಶಪಡಿಸಿಕೊಂಡಿದ್ದಾರೆ. ಇವರ ವಿರುದ್ಧ ನಜರ್‌ಬಾದ್‌ ಠಾಣೆಯಲ್ಲಿ ಆರ್ಥಿಕ ಮತ್ತು ಮಾದಕ ದ್ರವ್ಯ ಅಪರಾಧ ಪ್ರಕರಣ ದಾಖಲಾಗಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !