ಪರಿಸರ ಸ್ಮಾರ್ಟ್‌ ನಿಲ್ದಾಣವಾಗಿ ಮೈಸೂರು ರೈಲ್ವೆ ನಿಲ್ದಾಣ

ಗುರುವಾರ , ಜೂಲೈ 18, 2019
29 °C
ಐಎಸ್ಒ ಪ್ರಮಾಣಪತ್ರ ‍ಪಡೆದ ನೈರುತ್ಯ ರೈಲ್ವೆಯ ಮೊದಲ ರೈಲ್ವೆ ನಿಲ್ದಾಣ

ಪರಿಸರ ಸ್ಮಾರ್ಟ್‌ ನಿಲ್ದಾಣವಾಗಿ ಮೈಸೂರು ರೈಲ್ವೆ ನಿಲ್ದಾಣ

Published:
Updated:
Prajavani

ಮೈಸೂರು: ಶತಮಾನದ ಐತಿಹ್ಯ ಹೊಂದಿರುವ ನಗರದ ರೈಲ್ವೆ ನಿಲ್ದಾಣವನ್ನು ‘ಪರಿಸರ ಸ್ಮಾರ್ಟ್‌’ ನಿಲ್ದಾಣವನ್ನಾಗಿ ಅಭಿವೃದ್ಧಿಪಡಿಸಲು ರೈಲ್ವೆ ಮಂಡಳಿ ಹಸಿರು ನಿಶಾನೆ ತೋರಿದೆ.

ದೇಶದ 37 ನಗರಗಳಲ್ಲಿ ಪರಿಸರ ಸ್ಮಾರ್ಟ್‌ ರೈಲ್ವೆ ನಿಲ್ದಾಣ ನಿರ್ಮಾಣಕ್ಕೆ ರೈಲ್ವೆ ಮಂಡಳಿ ಯೋಜನೆ ರೂಪಿಸಿದ್ದು, ಇದರಲ್ಲಿ ಮೈಸೂರು ಸೇರ್ಪಡೆಯಾಗಿದೆ ಎಂದು ರೈಲ್ವೆ ವಿಭಾಗೀಯ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

ಐಎಸ್‌ಒ ಪ್ರಮಾಣಪತ್ರ: ನೈರುತ್ಯ ರೈಲ್ವೆ ವಿಭಾಗದಲ್ಲಿ ಇಂಟಿಗ್ರೇಟೆಡ್‌ ಐಎಸ್‌ಒ ಪ್ರಮಾಣಪತ್ರ ಪಡೆದ ಮೊದಲ ರೈಲ್ವೆ ನಿಲ್ದಾಣ ಎಂಬ ಕೀರ್ತಿಗೆ ಮೈಸೂರು ರೈಲ್ವೆ ನಿಲ್ದಾಣ ಭಾಜನವಾಗಿದ್ದು, ವಿಭಾಗದ ಸಿಬ್ಬಂದಿ ಸೇರಿದಂತೆ ಮೈಸೂರಿಗರ ಹರ್ಷ ಇಮ್ಮಡಿಗೊಳಿಸಿದೆ.

ವಿಭಾಗೀಯ ಪರಿಸರ ಅಧಿಕಾರಿ ಬ್ರಿಜ್ ಮೋಹನ್ ನೇತೃತ್ವದಲ್ಲಿ ರೈಲ್ವೆಯ ಪರಿಸರ ಮತ್ತು ಮನೆಗೆಲಸ ನಿರ್ವಹಣಾ ವಿಭಾಗವು ಕಡಿಮೆ ಸಮಯದಲ್ಲಿ ಸಮಗ್ರ ನಿರ್ವಹಣಾ ವ್ಯವಸ್ಥೆಯ ಪ್ರಮಾಣೀಕರಣಕ್ಕಾಗಿ ಅಗತ್ಯ ಕ್ರಮ ಕೈಗೊಂಡ ಫಲವಾಗಿ ಈ ಪ್ರಮಾಣಪತ್ರ ಲಭಿಸಿದೆ.

ಇದು ಐಎಸ್ಒ: 9001 ಗುಣಮಟ್ಟ ನಿರ್ವಹಣಾ ವ್ಯವಸ್ಥೆ, ಐಎಸ್ಒ:14001 ಪರಿಸರ ನಿರ್ವಹಣಾ ವ್ಯವಸ್ಥೆ ಮತ್ತು ಐಎಸ್ಒ:45001 ಸುರಕ್ಷತಾ ನಿರ್ವಹಣಾ ವ್ಯವಸ್ಥೆ ಎಂಬ 3 ಐಎಸ್ಒ ಪ್ರಮಾಣಪತ್ರಗಳನ್ನು ಒಳಗೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.

ವೈ–ಫೈ ವಿಸ್ತರಣೆ: ಮೈಸೂರು ವಿಭಾಗದ 30 ರೈಲ್ವೆ ನಿಲ್ದಾಣಗಳಿಗೆ ವೈ–ಫೈ ಸೌಲಭ್ಯ ವಿಸ್ತರಿಸಲು ರೈಲ್ವೆ ಸಚಿವಾಲಯ ಸಮ್ಮತಿ ನೀಡಿದೆ.

ಮೈಸೂರು ರೈಲ್ವೆ ವಿಭಾಗದಲ್ಲಿ ಪ್ರಸ್ತುತ 55ಕ್ಕೂ ಹೆಚ್ಚು ರೈಲ್ವೆ ನಿಲ್ದಾಣಗಳಲ್ಲಿ ಈಗಾಗಲೇ ವೈ–ಫೈ ಸೌಲಭ್ಯ ಕಲ್ಪಿಸಲಾಗಿದ್ದು, ಎರಡನೇ ಹಂತದಲ್ಲಿ 30 ರೈಲ್ವೆ ನಿಲ್ದಾಣಗಳಿಗೆ ವಿಸ್ತರಿಸಲಾಗುತ್ತಿದೆ ಎಂದು ರೈಲ್ವೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಾಗರಕಟ್ಟೆ, ಹೊಸ ಅಗ್ರಹಾರ, ನರಿಮೊಗರು, ಅಮ್ಮಸಂದ್ರ, ದೇವನೂರು, ಚಿಕ್ಕಮಗಳೂರು, ಸಾಸಲು, ಕರಜಗಿ, ತಳಕು ಮತ್ತು ಮೊಳಕಾಲ್ಮೂರು ರೈಲ್ವೆ ನಿಲ್ದಾಣಗಳು ಹೊಸದಾಗಿ ವೈ–ಫೈ ಸೌಲಭ್ಯ ಹೊಂದಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !