ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಈದ್‌ ಉಲ್‌ ಫಿತ್ರ್’ ಆಚರಣೆ ಇಂದು

ಒಂದು ತಿಂಗಳ ರಂಜಾನ್‌ ಉಪವಾಸಕ್ಕೆ ತೆರೆ; ನಗರದ ವಿವಿಧೆಡೆ ಭದ್ರತೆ
Last Updated 4 ಜೂನ್ 2019, 19:54 IST
ಅಕ್ಷರ ಗಾತ್ರ

ಮೈಸೂರು: ಮುಸ್ಲಿಮರ ಪವಿತ್ರ ಮಾಸ ರಂಜಾನ್‌ ತಿಂಗಳು ಮಂಗಳವಾರ ಕೊನೆಗೊಂಡಿದ್ದು, ಜೂನ್‌ 5 ರಂದು (ಬುಧವಾರ) ‘ಈದ್ ಉಲ್‌ ಫಿತ್ರ್’ ಹಬ್ಬ ಆಚರಿಸಲಾಗುತ್ತದೆ.

ಸರ್ಖಾಜಿ ಮೊಹಮ್ಮದ್‌ ಉಸ್ಮಾನ್‌ ಷರೀಫ್‌ ಅಧ್ಯಕ್ಷತೆಯಲ್ಲಿ ಮಂಗಳವಾರ ರಾತ್ರಿ ನಡೆದ ಚಂದ್ರ ದರ್ಶನ ಸಮಿತಿ ಸಭೆಯ ಬಳಿಕ ‘ಈದುಲ್‌ ಫಿತ್ರ್’ ಬುಧವಾರ ಆಚರಿಸಲು ನಿರ್ಧರಿಸಲಾಯಿತು.

ತಿಲಕ್‌ ನಗರ, ರಾಜೀವ್‌ ನಗರ ಮತ್ತು ಗೌಸಿಯಾ ನಗರದ ಈದ್ಗಾಗಳಲ್ಲಿ ಅಲ್ಲದೆ, ನಗರದ ವಿವಿಧೆಡೆಯಿರುವ ಮಸೀದಿಗಳಲ್ಲಿ ಬುಧವಾರ ಬೆಳಿಗ್ಗೆ ಈದ್‌ ನಮಾಜ್‌ ಹಾಗೂ ಖುತ್ಬಾ (ಪ್ರವಚನ) ನಡೆಯಲಿದೆ.

ತಿಲಕ್‌ ನಗರದ ಈದ್ಗಾದಲ್ಲಿ ಬೆಳಿಗ್ಗೆ 10.30ಕ್ಕೆ ನಡೆಯಲಿರುವ ನಮಾಜ್‌ಗೆ ಸರ್ಖಾಜಿ ಉಸ್ಮಾನ್ ಷರೀಫ್ ಅವರು ನೇತೃತ್ವ ವಹಿಸಲಿದ್ದಾರೆ. ನಮಾಜ್‌ ಬಳಿಕ ಪರಸ್ಪರರು ಶುಭ ಹಾರೈಸಲಿದ್ದಾರೆ. ಗೆಳೆಯರು ಮತ್ತು ಸಂಬಂಧಿಕರ ಮನೆಗೆ ಭೇಟಿಕೊಡಲಿದ್ದಾರೆ.

ರಂಜಾನ್‌ ತಿಂಗಳಲ್ಲಿ ಮುಸ್ಲಿಮರು ಶ್ರದ್ಧೆ ಹಾಗೂ ಭಕ್ತಿಯಿಂದ ಉಪವಾಸ ಆಚರಿಸುವರು. ಶವ್ವಾಲ್‌ ತಿಂಗಳ ಚಂದ್ರದರ್ಶನವಾದರೆ ಈದುಲ್‌ ಫಿತ್ರ್‌ ಆಚರಣೆ ನಡೆಯುತ್ತದೆ. ಈ ಹಬ್ಬ ಶಾಂತಿ, ಸಮಾನತೆಯನ್ನು ಸಾರುತ್ತದೆ ಎಂದು ಸರ್ಖಾಜಿ
ತಿಳಿಸಿದರು.

ಭರ್ಜರಿ ವ್ಯಾಪಾರ: ಹಬ್ಬ ಆಚರಿಸಲು ಮುಸ್ಲಿಮರು ಮಂಗಳವಾರ ಖರೀದಿಯ ಭರಾಟೆಯಲ್ಲಿ ತೊಡಗಿದ ಕಾರಣ ನಗರದಲ್ಲಿ ವ್ಯಾಪಾರ
ಗರಿಗೆದರಿತ್ತು.

ಮುಸ್ಲಿಂ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಉದಯಗಿರಿ, ತಿಲಕ್‌ನಗರ, ರಾಜೀವ್‌ ನಗರ, ಬನ್ನಿಮಂಟಪ, ಮಂಡಿ ಮೊಹಲ್ಲಾ, ಎನ್‌.ಆರ್‌.ಮೊಹಲ್ಲಾ ಪ್ರದೇಶಗಳ ಅಂಗಡಿಗಳಲ್ಲಿ ವ್ಯಾಪಾರ ಕಳೆಗಟ್ಟಿತ್ತು.

ಸಾಡೇ ರಸ್ತೆ, ಅರಸು ರಸ್ತೆಯಲ್ಲಿರುವ ಬಟ್ಟೆ ಅಂಗಡಿಗಳು ಅಲ್ಲದೆ ನಗರದ ಮಾಲ್‌ಗಳು, ಸೂಪರ್ ಮಾರ್ಕೆಟ್‌ ಮತ್ತು ಹೈಪರ್‌ ಮಾರ್ಕೆಟ್‌ಗಳಲ್ಲೂ ಹಬ್ಬದ ಖರೀದಿ ಜೋರಾಗಿತ್ತು. ಮಾಂಸದ ಅಂಗಡಿಗಳ ಮುಂದೆ ಉದ್ದನೆಯ ಸಾಲು
ಕಂಡುಬಂದಿತು.

ಎಲ್ಲೆಡೆ ಬಿಗಿಭದ್ರತೆ

‘ಈದುಲ್ ಫಿತ್ರ್’ ಹಬ್ಬದ ನಿಮಿತ್ತ ನಗರದಲ್ಲಿ ಪೊಲೀಸರು ಬಿಗಿ ಭದ್ರತೆ ಏರ್ಪಡಿಸಿದ್ದಾರೆ.

12 ನಗರ ಸಶಸ್ತ್ರ ತುಕಡಿ, 4 ಕರ್ನಾಟಕ ರಾಜ್ಯ ಮೀಸಲು ಪಡೆ, 30 ಅಶ್ವಾರೋಹಿ ದಳ, 2 ಕಮಾಂಡೊ ಪಡೆಗಳನ್ನು ನಿಯೋಜಿಸಲಾಗಿದೆ. 27 ಇನ್‌ಸ್ಪೆಕ್ಟರ್, 39 ಸಬ್‌ಇನ್‌ಸ್ಪೆಕ್ಟರ್, 108 ಸಹಾಯಕ ಸಬ್‌ಇನ್‌ಸ್ಪೆಕ್ಟರ್‌, 774 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 10 ಕಡೆ ಚೆಕ್‌ಪೋಸ್ಟ್‌ಗಳನ್ನು ರಚಿಸಲಾಗಿದೆ. ಮಂಗಳವಾರ ರಾತ್ರಿಯಿಂದಲೇ ಪ್ರಾರ್ಥನಾ ಮಂದಿರಗಳ ಮೇಲೆ ಕಣ್ಗಾವಲು ಇರಿಸಲಾಗಿದೆ ಎಂದು ಡಿಸಿಪಿ ಮುತ್ತುರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT