ಚುನಾವಣಾ ಸಿಬ್ಬಂದಿಗೆ ಹೃದಯಾಘಾತ; ಸಾವು

ಬುಧವಾರ, ಏಪ್ರಿಲ್ 24, 2019
31 °C

ಚುನಾವಣಾ ಸಿಬ್ಬಂದಿಗೆ ಹೃದಯಾಘಾತ; ಸಾವು

Published:
Updated:

ಮೈಸೂರು: ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣಾ ನಿರತ ಸಿಬ್ಬಂದಿ ಪುಟ್ಟಸ್ವಾಮಯ್ಯ (54) ಇಲ್ಲಿನ ಗ್ರಾಮಾಂತರ ಬಸ್‌ನಿಲ್ದಾಣದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಇವರು ಕೆ.ಆರ್.ಪೇಟೆಯ ಎಸ್‌ಡಿಪಿಒ ಕಚೇರಿಯಲ್ಲಿ ಪ್ರಥಮದರ್ಜೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಚುನಾವಣಾ ತರಬೇತಿಗೆಂದು ಮಳವಳ್ಳಿಗೆ ತೆರಳಿ ವಾಪಸ್ ತಮ್ಮ ಸ್ವಗ್ರಾಮ ಎಚ್.ಡಿ.ಕೋಟೆ ತಾಲ್ಲೂಕಿನ ಜಿನ್ನಹಳ್ಳಿಗೆ ತೆರಳುತ್ತಿದ್ದರು. ಈ ವೇಳೆ ಗ್ರಾಮಾಂತರ ಬಸ್‌ನಿಲ್ದಾಣದಲ್ಲಿ ಬಸ್‌ ಇಳಿಯುತ್ತಿದ್ದಂತೆ ಕುಸಿದು ಬಿದ್ದ ಇವರು ಸ್ಥಳದಲ್ಲೇ ಸಾವನ್ನಪ್ಪಿದರು. ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂಬ ಅಂಶ ಮರಣೋತ್ತರ ಪರೀಕ್ಷೆಯಲ್ಲಿ ಗೊತ್ತಾಗಿದೆ.

ಇವರು ಈ ಹಿಂದೆ ಕೆ.ಆರ್.ಪೇಟೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ವಿದ್ಯಾರ್ಥಿಗಳಿಗೆ ಮನೆಯಲ್ಲಿ ಉಚಿತವಾಗಿ ಇಂಗ್ಲಿಷ್ ಭಾಷೆಯನ್ನು ಕಲಿಸುತ್ತಿದ್ದರು. ಇವರಿಂದ ಇಂಗ್ಲಿಷ್ ಕಲಿತ ಅನೇಕ ಮಂದಿ ಉನ್ನತ ಹುದ್ದೆಗಳನ್ನು ಗಳಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಯುವ ಸ್ಥಳಕ್ಕೆ ಬಸ್‌ಗಳಲ್ಲಿ ನೂರಕ್ಕೂ ಅಧಿಕ ಮಂದಿ ಇವರ ವಿದ್ಯಾರ್ಥಿಗಳು ಬಂದು ಅಂತಿಮ ದರ್ಶನ ಪಡೆದರು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಲಷ್ಕರ್ ಠಾಣೆಯಲ್ಲಿ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 7

  Sad
 • 0

  Frustrated
 • 0

  Angry

Comments:

0 comments

Write the first review for this !